Friday, September 19, 2025

ಬೆಂಗಳೂರು ಹೈದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲಿನ ವೇಳಾಪಟ್ಟಿಯಲ್ಲಿ ಭಾರತೀಯ ರೈಲ್ವೆ ತುಸು ಬದಲಾವಣೆ ಮಾಡಿದೆ.

ಕಾಚೆಗುಡ-ಯಶವಂತಪುರ-ಕಾಚೆಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ (20703/20704) ಡಿಸೆಂಬರ್ 4 ರಿಂದ ಪರಿಷ್ಕರಣೆಗೊಳ್ಳಲಿರುವ ವೇಳಾಪಟ್ಟಿಯಂತೆ ಪ್ರತಿ ಶುಕ್ರವಾರಗಳಂದು ಸಂಚರಿವುಸುದಿಲ್ಲ. ಈ ರೈಲು ಪ್ರಸ್ತುತ ಬುಧವಾರಗಳಂದು ಸಂಚರಿಸುತ್ತಿಲ್ಲ. ಆದರೆ, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಪ್ರತಿ ಬುಧವಾರವೂ ಸಂಚರಿಸಲಿದೆ.

ಅಂದರೆ, ಶುಕ್ರವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿಯೂ ಸಂಚರಿಸಲಿವೆ. ಉಳಿದಂತೆ ಪ್ರಯಾಣದ ಸಮಯ, ನಿಲುಗಡೆಗಳು, ಟ್ರಿಪ್ ಈಗಿನಂತೆಯೇ ಮುಂದುವರಿಯಲಿದೆ ಎಂದು ಸೌತ್ ಸೆಂಟ್ರಲ್ ರೈಲ್ವೆ ಪ್ರಕಟಣೆ ತಿಳಿಸಿದೆ. ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲಿನ ಪರಿಷ್ಕೃತ ವೇಳಾಪಟ್ಟಿ ಡಿಸೆಂಬರ್ 4 ರಿಂದ ಜಾರಿಗೆ ಬರಲಿದೆ. ಅದೇ ರೀತಿ, ಸಿಕಂದರಾಬಾದ್-ವಿಶಾಖಪಟ್ಟಣ ಮಾರ್ಗದಲ್ಲಿ, ಸೋಮವಾರ ಹೊರತುಪಡಿಸಿ ಪ್ರತಿ ದಿನವೂ ಸೇವೆಗಳು ಕಾರ್ಯನಿರ್ವಹಿಸಲಿವೆ. ಇದು ಡಿಸೆಂಬರ್ 5 ರಿಂದ ಜಾರಿಗೆ ಬರುತ್ತದೆ ಎಂದು ಸೌತ್ ಸೆಂಟ್ರಲ್ ರೈಲ್ವೆ ತಿಳಿಸಿದೆ.

ಇದನ್ನೂ ಓದಿ