ಕಾರ್ಖಾನೆ ಸ್ಥಳಾಂತರಿಸುವ ವೇಳೆ ರಾಸಾಯನಿಕ ಟ್ಯಾಂಕ್ ಸ್ಫೋಟ: ಇಬ್ಬರು ಕಾರ್ಮಿಕರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾರ್ಖಾನೆ ಸ್ಥಳಾಂತರಿಸುವ ವೇಳೆ ಸಂಭವಿಸಿದ ಭೀಕರ ಸ್ಫೋಟ ಇಬ್ಬರು ಕಾರ್ಮಿಕರ ಜೀವ ಕಳೆದುಕೊಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕಾರೆಕಟ್ಟೆ ಸಮೀಪದ ಕೀರ್ತಿ ರಾಸಾಯನಿಕ ಘಟಕದಲ್ಲಿ ಈ ದುರಂತ ನಡೆದಿದ್ದು, ಇನ್ನಿಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಕಾರೆಕಟ್ಟೆ ಪ್ರದೇಶದಲ್ಲಿದ್ದ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಕಳೆದ 1 ತಿಂಗಳಿನಿಂದ ನಡೆಯುತ್ತಿತ್ತು. ಬಿಹಾರ ಮೂಲದ ಕಾರ್ಮಿಕರು ಟ್ಯಾಂಕ್ ತೆರವು ಮಾಡುತ್ತಿದ್ದಾಗ ಏಕಾಏಕಿ ಸ್ಫೋಟ ಸಂಭವಿಸಿದ್ದು, 2 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 2 ಮಂದಿಯನ್ನು ತಕ್ಷಣ … Continue reading ಕಾರ್ಖಾನೆ ಸ್ಥಳಾಂತರಿಸುವ ವೇಳೆ ರಾಸಾಯನಿಕ ಟ್ಯಾಂಕ್ ಸ್ಫೋಟ: ಇಬ್ಬರು ಕಾರ್ಮಿಕರ ಸಾ*ವು