October 7, 2026
Wednesday, October 7, 2026
spot_img

ಕಾರ್ಖಾನೆ ಸ್ಥಳಾಂತರಿಸುವ ವೇಳೆ ರಾಸಾಯನಿಕ ಟ್ಯಾಂಕ್ ಸ್ಫೋಟ: ಇಬ್ಬರು ಕಾರ್ಮಿಕರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರ್ಖಾನೆ ಸ್ಥಳಾಂತರಿಸುವ ವೇಳೆ ಸಂಭವಿಸಿದ ಭೀಕರ ಸ್ಫೋಟ ಇಬ್ಬರು ಕಾರ್ಮಿಕರ ಜೀವ ಕಳೆದುಕೊಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕಾರೆಕಟ್ಟೆ ಸಮೀಪದ ಕೀರ್ತಿ ರಾಸಾಯನಿಕ ಘಟಕದಲ್ಲಿ ಈ ದುರಂತ ನಡೆದಿದ್ದು, ಇನ್ನಿಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.

ಕಾರೆಕಟ್ಟೆ ಪ್ರದೇಶದಲ್ಲಿದ್ದ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಕಳೆದ 1 ತಿಂಗಳಿನಿಂದ ನಡೆಯುತ್ತಿತ್ತು. ಬಿಹಾರ ಮೂಲದ ಕಾರ್ಮಿಕರು ಟ್ಯಾಂಕ್ ತೆರವು ಮಾಡುತ್ತಿದ್ದಾಗ ಏಕಾಏಕಿ ಸ್ಫೋಟ ಸಂಭವಿಸಿದ್ದು, 2 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 2 ಮಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:

ಇದೇ ಘಟಕದಲ್ಲಿ 4 ವರ್ಷಗಳ ಹಿಂದೆ ಕೂಡ ರಾಸಾಯನಿಕ ಸೋರಿಕೆ ನಡೆದಿದ್ದು, ನೂರಾರು ಎಕರೆ ಬೆಳೆ ಹಾನಿಯಾಗಿತ್ತು. ಆಗ ಪ್ರಾಣ ಹಾನಿ ತಪ್ಪಿದ್ದರೂ, ಘಟಕದ ವಿರುದ್ಧ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಘಟಕ ಕಾರ್ಯಾರಂಭವಾಗದೆ ಇದ್ದ ಕಾರಣ ಈಗ ಸ್ಥಳಾಂತರಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸದೇ ಇದ್ದದ್ದೇ ಈ ದುರಂತಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣವು ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Must Read