Wednesday, September 3, 2025

ಸೈಲೆಂಟ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡ ಚಿಕ್ಕಣ್ಣ: ಇವ್ರೇ ನೋಡಿ ‘ಉಪಾಧ್ಯಕ್ಷ’ನ ಕೈ ಹಿಡಿಯೋ ಹುಡುಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಕ್ಷೇತ್ರದಲ್ಲಿ ವರ್ಷಗಳ ಕಾಲ ತನ್ನದೇ ಆದ ಹಾಸ್ಯಭರಿತ ಶೈಲಿಯಿಂದ ಕನ್ನಡ ಪ್ರೇಕ್ಷಕರನ್ನು ಮನರಂಜಿಸಿರುವ ನಟ ಚಿಕ್ಕಣ್ಣ, ಈಗ ತನ್ನ ವೈಯಕ್ತಿಕ ಜೀವನದಲ್ಲೂ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿ, ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಚಿಕ್ಕಣ್ಣ ಇದೀಗ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ.

ಮಂಡ್ಯದ ಮೂಲದ ಪಾವನಾ ಎಂಬ ಯುವತಿಯೊಂದಿಗೆ ನಟ ಚಿಕ್ಕಣ್ಣ ಅವರ ನಿಶ್ಚಯ ನಡೆದಿದೆ. ಮಹದೇವಪುರ ಗ್ರಾಮದ ಪಾವನಾ ಮತ್ತು ಚಿಕ್ಕಣ್ಣ ಜೋಡಿಯ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಮದುವೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ, ಆದರೆ ಈಗಾಗಲೇ ಶುಭಾಶಯಗಳ ಸರಮಾಲೆಯೇ ಹರಿದು ಬರುತ್ತಿದೆ.

ಚಿಕ್ಕಣ್ಣ ಅವರು ಟಿವಿ ಶೋ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿ, ಬಹು ಬೇಡಿಕೆಯ ಹಾಸ್ಯನಟನಾಗಿ ಹೊರಹೊಮ್ಮಿದರು. 2013ರಲ್ಲಿ ಬಿಡುಗಡೆಯಾದ ‘ರಾಜಹುಲಿ’ ಮತ್ತು 2014ರ ‘ಅಧ್ಯಕ್ಷ’ ಸಿನಿಮಾಗಳಲ್ಲಿ ಯಶ್ ಹಾಗೂ ಶರಣ್ ಜೊತೆ ಹಾಸ್ಯಮಯ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮನಗೆದ್ದರು. ಅವರ ಕಾಮಿಡಿ ಟೈಮಿಂಗ್ ಮತ್ತು ವಿಶಿಷ್ಟ ಅಭಿನಯ ಶೈಲಿ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯವನ್ನು ತಂದಿತು.

2024ರಲ್ಲಿ ಬಿಡುಗಡೆಯಾದ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ಪರದೆ ಮೇಲೆ ಕಾಣಿಸಿಕೊಂಡು ಯಶಸ್ಸು ಕಂಡರು. ಇದರಿಂದ ಅವರು ಕೇವಲ ಹಾಸ್ಯನಟನಲ್ಲ, ಸಂಪೂರ್ಣ ನಾಯಕನಾಗಿ ಸಹ ತಮಗೆ ಸವಾಲು ಹಾಕಿಕೊಳ್ಳಬಲ್ಲರು ಎಂಬುದನ್ನು ಸಾಬೀತುಪಡಿಸಿದರು.

ಇದನ್ನೂ ಓದಿ