ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿ ಜಿಲ್ಲೆಯ ಶಿವಬಸವ ನಗರದಲ್ಲಿ ಒಂದು ವರ್ಷದ ಮಗು ಬಕೆಟ್‌ನಲ್ಲಿ ಮುಳುಗಿ ಮೃತಪಟ್ಟಿದೆ.
ಒಂದು ವರ್ಷದ ಮಗು ದಕ್ಷಿತ್ ಯಳಂಬಲ್ಲಿಮಠ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ. ಆಟವಾಡುತ್ತಾ ಹಾಗೇ ನೀರಿದ್ದ ಬಕೆಟ್ಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ.
ಮಕ್ಕಳನ್ನು ಎಷ್ಟೇ ಕಣ್ಣಲ್ಲಿಟ್ಟು ಕಾಪಾಡಿದರೂ ಇಂತಹ ಅವಘಡ ಸಂಭವಿಸಿದ್ದಕ್ಕೆ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.
ಆಟವಾಡುತ್ತಾ ಮನೆಯ ಬಕೆಟ್‌ನಲ್ಲಿ ಮುಳುಗಿ ಮಗು ಸಾವು

