Wednesday, September 10, 2025

CINE | ಯಶ್ ಕೆಲಸದ ರೀತಿ ನೋಡಿ ದಂಗಾದ ಬಾಲಿವುಡ್, ನಟನ ಬಗ್ಗೆ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಯಶ್ ಅವರು ಅನೇಕರಿಗೆ ಸ್ಫೂರ್ತಿದಾಯಕ ಆಗಿದ್ದಾರೆ. ಅವರು ತಮ್ಮ ಕೆಲಸದ ಮೂಲಕ ಅನೇಕರಿಗೆ ಮಾದರಿ ಆಗಿದ್ದಾರೆ. ಕನ್ನಡದಿಂದ ನಟ ಇಡೀ ವಿಶ್ವದಲ್ಲೇ ಹೆಸರು ಮಾಡಿದ್ದಾರೆ.

ಕನ್ನಡದ ಹೀರೋ ಒಬ್ಬರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದು ಎಂದರೆ ಅದು ಸುಲಭದ ವಿಚಾರ ಅಲ್ಲ. ‘ಟಾಕ್ಸಿಕ್’ ಚಿತ್ರವನ್ನು ಇಂಗ್ಲಿಷ್?ನಲ್ಲೂ ಬಿಡುಗಡೆ ಮಾಡಲಾಗುತ್ತಿದೆ.

Superstar Yash rejects a pan masala advertisementಯಶ್ ಕೆಲಸದ ಶೈಲಿ ಹಾಗೂ ಮಾನವೀಯತೆ ನೋಡಿ ಬಾಲಿವುಡ್ ನಟ ಅಕ್ಷಯ್ ಓಬೆರಾಯ್ ಸ್ಫೂರ್ತಿಗೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

‘ನಾನು ಅದೃಷ್ಟವಂತ. ಹೃತಿಕ್ ರೋಷನ್ ಜೊತೆ ಬಾಲಿವುಡ್?ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಇದಾದ ಬಳಿಕ ಯಶ್? ಜೊತೆ ಸಿನಿಮಾ ಮಾಡುತ್ತಿದ್ದೇನೆ. ಅವರು ದೊಡ್ಡ ಸ್ಟಾರ್. ಆದರೆ, ಮೃದುವಾಗಿ ಮಾತನಾಡುತ್ತಾರೆ. ಅವರು ಮೈಸೂರಿನವರು. ಅವರ ತಂದೆ ಬಸ್ ಡ್ರೈವರ್ ಆಗಿದ್ದರಂತೆ. ಯಶ್ ಅವರು ತಮ್ಮ ದಾರಿಯನ್ನು ನಿರ್ಮಿಸಿಕೊಂಡರು. ಅವರ ಜೊತೆ ಕೆಲಸ ಮಾಡಿ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ ಎಂದಿದ್ದಾರೆ ಅಕ್ಷಯ್.

ಇದನ್ನೂ ಓದಿ