Friday, September 5, 2025

CINE | ‘ರಾಮಾಯಣ’ ಟೀಮ್ ಜಾಯಿನ್ ಆದ ನುರಿತ ಹಾಲಿವುಡ್ ತಂತ್ರಜ್ಞ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವ ಸಿನಿಮಾ ‘ರಾಮಾಯಣ’. ಯಶ್, ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಮೊದಲಾದ ನಟ ನಟಿಯರು ಅಭಿನಯಿಸುತ್ತಿರುವ ಈ ಚಿತ್ರವನ್ನು ದೇಶದ ಅತಿ ದೊಡ್ಡ ಬಜೆಟ್‌ನಲ್ಲೇ ನಿರ್ಮಿಸಲಾಗುತ್ತಿದೆ. ಕೇವಲ ಭಾರತದಲ್ಲೇ ಅಲ್ಲ, ಹಾಲಿವುಡ್ ಸಿನಿಮಾಗಳ ಮಟ್ಟದ ತಂತ್ರಜ್ಞಾನ, ತಂತ್ರಜ್ಞರನ್ನು ಬಳಸಿಕೊಳ್ಳುವುದರ ಮೂಲಕ ‘ರಾಮಾಯಣ’ ಚಿತ್ರವನ್ನು ವಿಶ್ವಮಟ್ಟದಲ್ಲಿ ತರುವ ಪ್ರಯತ್ನ ನಡೆಯುತ್ತಿದೆ.

ಈ ಸಿನಿಮಾಕ್ಕೆ ಹಾಲಿವುಡ್‌ನ ಟಾಪ್‌ ವಿಎಫ್‌ಎಕ್ಸ್ ಸ್ಟುಡಿಯೋ ಡಿಎನ್‌ಇಜಿ ಕೆಲಸ ಮಾಡುತ್ತಿದೆ. ಈ ಸಂಸ್ಥೆ ‘ಹ್ಯಾರಿಪಾಟರ್’, ‘ಡಾರ್ಕ್ ನೈಟ್’, ಜೇಮ್ಸ್ ಬಾಂಡ್ ಸರಣಿಯಂತೆ ವಿಶ್ವದ ಖ್ಯಾತ ಸಿನಿಮಾಗಳಿಗೆ ವಿಎಫ್‌ಎಕ್ಸ್ ನೀಡಿದೆ. ಇದೇ ಸಂಸ್ಥೆ ‘ರಾಮಾಯಣ’ಕ್ಕೂ ವಿಶೇಷ ದೃಶ್ಯಗಳನ್ನು ರೂಪಿಸುತ್ತಿದೆ.

‘ವೆನಮ್’, ‘ಕಾಂಗ್ vs ಗಾಡ್ಜಿಲ್ಲಾ’ ಸಿನಿಮಾಗಳಲ್ಲಿ ಕೆಲಸ ಮಾಡಿದ ಕ್ಸೇವಿಯರ್ ಬೆರ್ನಾಶೋನಿ ಅವರನ್ನು ‘ರಾಮಾಯಣ 2’ ಚಿತ್ರದ ವಿಎಫ್‌ಎಕ್ಸ್ ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ. ಎರಡನೇ ಭಾಗದಲ್ಲಿ ಅತಿ ಹೆಚ್ಚು ದೃಶ್ಯಗಳು ವಿಎಫ್‌ಎಕ್ಸ್‌ನ ಮೇಲೆ ಅವಲಂಬಿತವಾಗಿರುವುದರಿಂದ, ಅವರ ನೇಮಕಾತಿ ಸಿನಿಮಾಕ್ಕೆ ದೊಡ್ಡ ಶಕ್ತಿ.

ಸಿನಿಮಾದಲ್ಲಿ ಕೌಸಲ್ಯ ಪಾತ್ರದಲ್ಲಿ ನಟಿಸುತ್ತಿರುವ ಇಂದಿರಾ ಕೃಷ್ಣ ತಮ್ಮ ಅನುಭವ ಹಂಚಿಕೊಂಡು, ಕ್ರಿಸ್ಟೋಫರ್ ನೋಲನ್ ಅವರ ‘ಇಂಟರ್ಸ್ಟೆಲ್ಲರ್’ ಚಿತ್ರದಲ್ಲಿ ಬಳಸಿದ ವಿಶೇಷ ಯಂತ್ರವನ್ನು ‘ರಾಮಾಯಣ’ಕ್ಕೂ ತರಲಾಗಿತ್ತು ಎಂದು ತಿಳಿಸಿದ್ದಾರೆ. 86 ಕ್ಯಾಮೆರಾಗಳ ಸಹಾಯದಿಂದ ನಟನ ಮುಖಭಾವ ಮತ್ತು ಚಲನೆಗಳನ್ನು ಸಂಪೂರ್ಣವಾಗಿ ಸೆರೆ ಹಿಡಿಯುವ ತಂತ್ರಜ್ಞಾನ ಬಳಸಲಾಗಿದೆ.

ಇದನ್ನೂ ಓದಿ