Tuesday, January 13, 2026
Tuesday, January 13, 2026
spot_img

CINE | ಕಲೆಕ್ಷನ್ ಪಾತಳಕ್ಕೆ: ಸಂಕ್ರಾಂತಿ ರಜೆಯಲ್ಲೂ ಪ್ರೇಕ್ಷಕರಿಲ್ಲದೆ ಸೊರಗಿದ ‘ರೆಬೆಲ್ ಸ್ಟಾರ್’ ಚಿತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಹಿನ್ನಡೆ ಅನುಭವಿಸುತ್ತಿದೆ. ಜನವರಿ 09ರಂದು ಅದ್ಧೂರಿಯಾಗಿ ತೆರೆಕಂಡಿದ್ದ ಈ ಸಿನಿಮಾ, ಮೊದಲ ದಿನ ವಿಶ್ವದಾದ್ಯಂತ ಭರ್ಜರಿ 112 ಕೋಟಿ ರೂಪಾಯಿ ಗಳಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ, ಎರಡನೇ ದಿನದಿಂದಲೇ ಪ್ರೇಕ್ಷಕರ ನೆಗೆಟಿವ್ ಪ್ರತಿಕ್ರಿಯೆಗಳು ಚಿತ್ರದ ಕಲೆಕ್ಷನ್ ಮೇಲೆ ಬಲವಾದ ಹೊಡೆತ ನೀಡಿವೆ.

ಸಿನಿಮಾದ ಕತೆ ಮತ್ತು ದೃಶ್ಯಗಳು ಅತೀ ಹೆಚ್ಚು ‘ಕ್ರಿಂಜ್’ ಆಗಿವೆ ಎಂಬ ವಿಮರ್ಶೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ನೆಗೆಟಿವ್ ಟಾಕ್‌ನಿಂದಾಗಿ ಚಿತ್ರದ ಗಳಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಮೊದಲ ದಿನ ನೂರರ ಗಡಿ ದಾಟಿದ್ದ ಸಿನಿಮಾ, ಸೋಮವಾರ (ನಾಲ್ಕನೇ ದಿನ) ವಿಶ್ವದಾದ್ಯಂತ ಗಳಿಸಿರುವುದು ಕೇವಲ 6 ಕೋಟಿ ರೂಪಾಯಿ ಮಾತ್ರ. ಇದು ಮೊದಲ ದಿನಕ್ಕೆ ಹೋಲಿಸಿದರೆ ಸುಮಾರು 88% ರಷ್ಟು ಕುಸಿತ ಕಂಡಂತಾಗಿದೆ.

ಶುಕ್ರವಾರ (ದಿನ 1): 112 ಕೋಟಿ ರೂ. (ವಿಶ್ವದಾದ್ಯಂತ)

ಶನಿವಾರ (ದಿನ 2): 30 ಕೋಟಿ ರೂ. (ಭಾರತದಲ್ಲಿ)

ಭಾನುವಾರ (ದಿನ 3): 22 ಕೋಟಿ ರೂ. (ಭಾರತದಲ್ಲಿ)

ಸೋಮವಾರ (ದಿನ 4): 4 ಕೋಟಿ ರೂ. (ಭಾರತದಲ್ಲಿ) + 2 ಕೋಟಿ ರೂ. (ವಿದೇಶ) = 6 ಕೋಟಿ ರೂ.

ಸಾಮಾನ್ಯವಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸಿನಿಮಾಗಳಿಗೆ ಭಾರಿ ಬೇಡಿಕೆ ಇರುತ್ತದೆ. ಆದರೆ, ‘ದಿ ರಾಜಾ ಸಾಬ್’ ಚಿತ್ರವನ್ನು ನೋಡಲು ಪ್ರೇಕ್ಷಕರು ಆಸಕ್ತಿ ತೋರುತ್ತಿಲ್ಲ. ಪ್ರಭಾಸ್ ಅವರ ಈ ಹಿಂದಿನ ಸೋಲುಗಳಾದ ‘ಆದಿಪುರುಷ್’ ಮತ್ತು ‘ಸಾಹೋ’ ಚಿತ್ರಗಳಿಗಿಂತಲೂ ಈ ಸಿನಿಮಾದ ಕಲೆಕ್ಷನ್ ದಾರುಣವಾಗಿ ಕುಸಿಯುತ್ತಿದೆ ಎಂಬುದು ಸದ್ಯದ ಮಾಹಿತಿ.

Most Read

error: Content is protected !!