Friday, December 12, 2025

CINE | ‘ಡೆವಿಲ್’ ರಿಲೀಸ್‌ಗೆ ಕೌಂಟ್ ಡೌನ್ ಶುರು: ದರ್ಶನ್ ಚಿತ್ರಕ್ಕೆ ಶುಭಾಶಯ ಕೋರಿದ ಡಿವೈನ್ ಸ್ಟಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಕಾಣಲು ಸಿದ್ಧವಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳಲ್ಲೂ, ಚಿತ್ರರಂಗದಲ್ಲೂ ವಿಶೇಷ ಹುಮ್ಮಸ್ಸು ಮೂಡಿದೆ. ಬಹುನಿರೀಕ್ಷಿತ ಈ ಚಿತ್ರ ಡಿಸೆಂಬರ್ 11ರಂದು ಪ್ರೇಕ್ಷಕರ ಮುಂದೆ ಬರಲಿದ್ದು, ಮೊದಲ ದಿನದ ಭರ್ಜರಿ ಪ್ರದರ್ಶನಕ್ಕೆ ತಯಾರಾಗಿದೆ.

ಚಿತ್ರ ಬಿಡುಗಡೆಗೂ ಮುನ್ನವೇ ನಟ ರಿಷಬ್ ಶೆಟ್ಟಿ ಶುಭಾಶಯ ಕೋರಿರುವುದು ಅಭಿಮಾನಿಗಳಿಗೆ ಇನ್ನಷ್ಟು ಉತ್ಸಾಹ ತಂದಿದೆ. “ಬ್ಲಾಕ್‌ಬಸ್ಟರ್ ರಿಲೀಸ್‌ಗೆ ದರ್ಶನ್ ಸರ್ ಹಾಗೂ ಡೆವಿಲ್ ತಂಡಕ್ಕೆ ಶುಭಾಶಯಗಳು” ಎಂಬ ಅವರ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡೆವಿಲ್ ಚಿತ್ರವು ದರ್ಶನ್ ಅವರ ವೃತ್ತಿಜೀವನದಲ್ಲಿ ಮಹತ್ವದ ಚಿತ್ರವೆಂದು ಹೇಳಲಾಗುತ್ತಿದೆ. ದರ್ಶನ್ ಅವರು ಪ್ರಚಾರದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರ ಅಭಿಮಾನಿಗಳು, ಕುಟುಂಬದವರು ಹಾಗೂ ತಂಡ ಸಿನಿಮಾ ಗೆಲುವಿನ ವಿಶ್ವಾಸದಲ್ಲಿದ್ದಾರೆ.

error: Content is protected !!