Wednesday, November 5, 2025

CINE | ಕೌಂಟ್‌ಡೌನ್ ಸ್ಟಾರ್ಟ್: ‘ಮಾರ್ಕ್’ ಟೀಸರ್‌ಗೆ ಮುಹೂರ್ತ ಫಿಕ್ಸ್! ಡಿ.25ರ ರಿಲೀಸ್‌ಗೆ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಸುದೀಪ್ ಅವರ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ‘ಮಾರ್ಕ್’ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದು ಅಭಿಮಾನಿಗಳಿಗೆ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಸಿದೆ.

ಸದ್ಯ ಮ್ಯಾಕ್ಸ್ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಸುದೀಪ್ ಅವರ ‘ಮಾರ್ಕ್’ ಸದ್ಯಕ್ಕೆ ಹೆಚ್ಚು ಕುತೂಹಲ ಮೂಡಿಸಿರುವ ಚಿತ್ರಗಳ ಪಟ್ಟಿಯಲ್ಲಿದೆ. ಈ ಹಿಂದೆ ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ ಕಿಚ್ಚನ ದರ್ಬಾರ್ ಹೇಗಿರುತ್ತದೆ ಎಂಬುದನ್ನು ಅಭಿಮಾನಿಗಳು ನೋಡಿದ್ದಾರೆ. ಚಿತ್ರದ ಒಂದು ಹಾಡು ಕೂಡ ಈಗಾಗಲೇ ಬಿಡುಗಡೆಗೊಂಡಿದೆ.

ಟೀಸರ್ ಯಾವಾಗ?

‘ಮಾರ್ಕ್’ ಸಿನಿಮಾ ಟೀಸರ್ ಇದೇ ಶುಕ್ರವಾರ (ನವೆಂಬರ್ 7) ಸಂಜೆ 6.45ಕ್ಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ಸ್ವತಃ ಸುದೀಪ್ ಅವರೇ “ಮಾರ್ಕ್’ ಮಾಡಿಕೊಳ್ಳಿ” ಎಂಬ ಸಂದೇಶ ನೀಡುವ ಮೂಲಕ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದ್ದಾರೆ.

ಈ ಹಿಂದೆ ಚಿತ್ರದ ಮುಹೂರ್ತದ ದಿನವೇ ಕಿಚ್ಚ ಡಿಸೆಂಬರ್ 25ರಂದು ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ, ‘ಮಾರ್ಕ್’ ಚಿತ್ರತಂಡ ಹಗಲು-ರಾತ್ರಿ ಎನ್ನದೆ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸುತ್ತಿದೆ. ಇತ್ತೀಚಿನ ಈ ಟೀಸರ್ ಬಿಡುಗಡೆಯು ನಿಗದಿಯಾದ ಡಿಸೆಂಬರ್ 25ರ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಇನ್ನಷ್ಟು ಗಟ್ಟಿಯಾಗಿ ಹೇಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಕಿಚ್ಚನ ಫ್ಯಾನ್ಸ್‌ಗೆ ಇದೊಂದು ಪಕ್ಕಾ ಮನರಂಜನೆಯ ಔತಣ!

error: Content is protected !!