Friday, December 12, 2025

CINE | ಧುರಂಧರ್ ಗೆ ಬ್ಯಾನ್ ಹೊಡೆತ: ಆರು ದೇಶಗಳಲ್ಲಿ ರಣವೀರ್ ಸಿಂಗ್ ಚಿತ್ರಕ್ಕಿಲ್ಲ ಅವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ‘ಧುರಂಧರ್’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ವಿದೇಶಿ ಬಾಕ್ಸ್ ಆಫೀಸ್‌ನಲ್ಲಿ ಶಕ್ತಿಶಾಲಿ ಪ್ರದರ್ಶನ ನೀಡುತ್ತಿರುವ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 44.08 ಕೋಟಿ ರೂಪಾಯಿ ಗಳಿಸಿದೆ.

ಭಾರತೀಯ ಬೇಹುಗಾರಿಕೆಯನ್ನು ಆಧಾರ ಮಾಡಿಕೊಂಡು ನಿರ್ಮಿಸಲಾದ ಈ ಆಕ್ಷನ್–ಥ್ರಿಲ್ಲರ್ ರಾಷ್ಟ್ರದಲ್ಲಿ ಭಾರಿ ಪ್ರತಿಕ್ರಿಯೆ ಪಡೆಯುತ್ತಿದ್ದರೂ, ವಿದೇಶದಲ್ಲಿ ಅದೇ ಚಿತ್ರ ವಿವಾದಕ್ಕೆ ಗುರಿಯಾಗಿದೆ.

ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಮಾಧವನ್ ಸೇರಿದಂತೆ ಹಲವು ತಾರೆಗಳು ಅಭಿನಯಿಸಿರುವ ‘ಧುರಂಧರ್’ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಂಗ್ರಹ ದಾಖಲಿಸಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಚಿತ್ರ ದೇಶದಲ್ಲಿ 200 ಕೋಟಿ ಸಂಗ್ರಹಿಸಿದೆ. ಹಾಡುಗಳು ಹಾಗೂ ಆಕ್ಷನ್ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಪ್ರೇಕ್ಷಕರನ್ನು ಸೆಳೆದಿವೆ.

ಆದರೆ, ಪಾಕಿಸ್ತಾನ ವಿರೋಧಿ ಕಥಾಹಂದರ ಹೊಂದಿದೆ ಎನ್ನುವ ಕಾರಣಕ್ಕೆ ಆರು ಗಲ್ಫ್ ರಾಷ್ಟ್ರಗಳು ಚಿತ್ರಕ್ಕೆ ಪ್ರದರ್ಶನ ನಿಷೇಧ ಹೇರಿವೆ. ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳ ಸೆನ್ಸಾರ್ ಮಂಡಳಿಗಳು ಚಿತ್ರ ಬಿಡುಗಡೆಯಿಗೆ ಅನುಮತಿ ನೀಡಿಲ್ಲ.

ತಂಡವು ನಿಷೇಧ ತೆರವು ಗೊಳಿಸಲು ಪ್ರಯತ್ನಿಸಿದರೂ ಫಲಿತಾಂಶ ಬಾರದೆ ಉಳಿದಿದೆ. ಇದಕ್ಕೂ ಮುನ್ನ ‘ಸ್ಕೈ ಫೋರ್ಸ್’, ‘ಫೈಟರ್’, ‘ಆರ್ಟಿಕಲ್ 370’ ಹಾಗೂ ‘ಟೈಗರ್ 3’ ಚಿತ್ರಗಳಿಗೂ ಇದೇ ರೀತಿಯ ನಿರ್ಬಂಧ ಎದುರಿಸಿತ್ತು.

error: Content is protected !!