ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವನ್ ಕಲ್ಯಾಣ್ ನಟನೆಯ ‘ಓಜಿ’ ಚಿತ್ರವು ಟ್ರೇಲರ್ ಮೂಲಕ ಗಮನ ಸೆಳೆಯಿತು ಎನ್ನಬಹುದು. ಈ ಚಲನಚಿತ್ರದ ಶೂಟಿಂಗ್ ಬಹಳ ಸಮಯದಿಂದ ಹಾಗೆಯೇ ಉಳಿದುಕೊಂಡಿತ್ತು. ಈಗ ಪವನ್ ಕಲ್ಯಾಣ್ ಅವರು ಅದನ್ನು ಮಾಡಿಕೊಟ್ಟಿದ್ದಾರೆ. ಈಗ ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ರಿಲೀಸ್ ಆಗಿದ್ದು ದೊಡ್ಡ ಯಶಸ್ಸು ಕಂಡಿದೆ.
‘ಓಜಿ’ ಚಿತ್ರ ಸೆಪ್ಟೆಂಬರ್ 25ರಂದು ರಿಲೀಸ್ ಆಗಿದೆ. ಸೆಪ್ಟೆಂಬರ್ 25ರಂದು ಸಿನಿಮಾ ಚಿತ್ರವು 63.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು, ಶುಕ್ರವಾರವ ಚಿತ್ರವು 19.25 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಸದ್ಯ ಚಿತ್ರದ ಒಟ್ಟಾರೆ ಕಲೆಕ್ಷನ್ 104 ಕೋಟಿ ರೂಪಾಯಿ ಆಗಿದೆ. ಸಿನಿಮಾ ಎರಡೇ ದಿನಕ್ಕೆ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ ಎಂದರೆ ಚಿತ್ರ ಗೆಲುವು ಕಂಡಿದೇ ಎಂದೇ ಅರ್ಥ. ಇದು ಪವನ್ ಕಲ್ಯಾಣ್ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಈ ಗೆಲುವನ್ನು ಪವನ್ ಕಲ್ಯಾಣ್ ಕೂಡ ಖುಷಿ ಪಟ್ಟಿದ್ದಾರೆ.