Monday, October 13, 2025

CINE | ಮಾಸ್ ಲುಕ್‌ನಲ್ಲಿ ಡಿಂಪಲ್ ಕ್ವೀನ್: ರಚ್ಚು ರಗಡ್ ಅವತಾರಕ್ಕೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಚಿತಾ ರಾಮ್ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ‘ಡ್ರೀಮ್ ಗರ್ಲ್’ ಎಂಬ ಹೆಸರಿನಲ್ಲಿ ಜನಮನ ಗೆದ್ದಿರುವ ರಚಿತಾ ರಾಮ್ ಅವರು ಈ ಬಾರಿ ಸಂಪೂರ್ಣ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹು ನಿರೀಕ್ಷೆಯಲ್ಲಿರುವ ‘ಲ್ಯಾಂಡ್​ಲಾರ್ಡ್’ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದು, ಅವರ ಹೊಸ ರೂಪ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ಟೀಸರ್‌ನಲ್ಲಿ ರಚಿತಾ ರಾಮ್ ಅವರನ್ನು ಗಟ್ಟಿಯಾದ, ರಗಡ್ ಲುಕ್‌ನಲ್ಲಿ ಪರಿಚಯಿಸಲಾಗಿದೆ. ಅವರು ಈ ಸಿನಿಮಾದಲ್ಲಿ ‘ಚಿನ್ನಮ್ಮ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರದ ಮೂಲಕ ತಮ್ಮ ಅಭಿನಯದ ಮತ್ತೊಂದು ಹಾದಿ ತೋರಿಸಲು ಅವರು ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಹೀರೋ ಆಗಿ ನಟಿಸುತ್ತಿದ್ದು, ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ನಿರ್ಮಾಣ ನಡೆಸುತ್ತಿದ್ದಾರೆ. ನಿರ್ದೇಶನ ಜಡೇಶ್ ಕೆ. ಹಂಪಿ ಅವರದ್ದು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳೊಂದಿಗೆ ಸೇರಿಕೊಂಡ ರಚಿತಾ ರಾಮ್, ಈ ಟೀಸರ್ ಬಿಡುಗಡೆಗೊಂಡದ್ದೇ ತಮ್ಮಗೆ ವಿಶೇಷ ಉಡುಗೊರೆ ಎಂದಿದ್ದಾರೆ.

ನಿರ್ದೇಶಕ ಜಡೇಶ್ ಅವರು ಮಾತನಾಡುವಾಗ, “ಇಂಥ ಪಾತ್ರವನ್ನು ರಚಿತಾ ರಾಮ್ ಒಪ್ಪುತ್ತಾರಾ ಎನ್ನುವ ಅನುಮಾನ ನಮಗಿತ್ತು. ಆದರೆ ಅವರು ಸಂಪೂರ್ಣ ಶ್ರದ್ಧೆಯಿಂದ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದನ್ನು ನೋಡಿ ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.

error: Content is protected !!