Monday, October 27, 2025

CINE | ‘ಏಕ್ ದಿವಾನೆ ಕಿ ದೀವಾನಿಯತ್’ ಪ್ರೇಮ ಜ್ವರಕ್ಕೆ ಬಾಕ್ಸ್ ಆಫೀಸ್ ತತ್ತರ! 4ನೇ ದಿನವೂ ಭರ್ಜರಿ ಓಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರ್ಷವರ್ಧನ್ ರಾಣೆ ಮತ್ತು ಸೋನಂ ಬಜ್ವಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಏಕ್ ದಿವಾನೆ ಕಿ ದೀವಾನಿಯತ್’ (Ek Deewane Ki Deewaniyat) ಅಕ್ಟೋಬರ್ 21 ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮಿಲಾಪ್ ಝಾವೇರಿ ನಿರ್ದೇಶನದ ಈ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ ಬಿಡುಗಡೆಯ ನಾಲ್ಕನೇ ದಿನವಾದ ಅಕ್ಟೋಬರ್ 24ರಂದು ₹5.50 ಕೋಟಿ ರೂಪಾಯಿ ನೆಟ್‌ ವಸೂಲಿ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದೆ.

ಗುರುವಾರಕ್ಕೆ ಹೋಲಿಸಿದರೆ ಸುಮಾರು 15% ಇಳಿಕೆಯಾಗಿದ್ದರೂ ಚಿತ್ರವು ಶಕ್ತಿಯುತ ಹಿಡಿತವನ್ನು ಕಾಯ್ದುಕೊಂಡಿದೆ. ಹಬ್ಬದ ವೀಕೆಂಡ್ ಬಳಿಕವೂ ಚಿತ್ರವು ಉತ್ತಮ ಪ್ರದರ್ಶನ ನೀಡುತ್ತಿರುವುದು ಚಿತ್ರತಂಡಕ್ಕೆ ಖುಷಿಯ ವಿಚಾರವಾಗಿದೆ.

ಈತನಕ ಚಿತ್ರವು ಒಟ್ಟು ₹28 ಕೋಟಿಯ ಗಡಿಯನ್ನು ದಾಟಿದ್ದು, ಮುಂದಿನ ದಿನಗಳಲ್ಲಿ ₹43 ಕೋಟಿ ವರೆಗೆ ವಸೂಲಿ ಮಾಡುವ ನಿರೀಕ್ಷೆಯಿದೆ. ದೀಪಾವಳಿ ವಾರಾಂತ್ಯದ ಪ್ರಯೋಜನವನ್ನು ಚಿತ್ರ ಸಂಪೂರ್ಣವಾಗಿ ಪಡೆದುಕೊಂಡಂತಾಗಿದೆ.

ಚಿತ್ರದ ಮೊದಲ ದಿನದ ವಸೂಲಿ ₹9 ಕೋಟಿ, ಎರಡನೇ ದಿನ ₹7.75 ಕೋಟಿ, ಮೂರನೇ ದಿನ ₹6.25 ಕೋಟಿ ಮತ್ತು ನಾಲ್ಕನೇ ದಿನ ₹5.25 ಕೋಟಿ ಕಲೆಕ್ಷನ್ ಆಗಿದೆ.

error: Content is protected !!