Monday, November 3, 2025

CINE | ಕಾಂಚನಾ-4: ರಾಘವ್ ಲಾರೆನ್ಸ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಈ ಸ್ಟಾರ್ ನಟಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರರ್‌ ಕಾಮಿಡಿ ಪ್ರಕಾರದ ಚಿತ್ರಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡ ‘ಕಾಂಚನಾ’ ಸರಣಿ ಮತ್ತೊಮ್ಮೆ ಬೃಹತ್ ಪ್ರಮಾಣದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ನಟ ಮತ್ತು ನಿರ್ದೇಶಕ ರಾಘವ್ ಲಾರೆನ್ಸ್ ಅವರ ನಿರ್ದೇಶನದಲ್ಲಿ ಮೂವರು ಭಾಗಗಳಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದ ಈ ಸರಣಿಯ ನಾಲ್ಕನೇ ಭಾಗ ‘ಕಾಂಚನಾ ಪಾರ್ಟ್-4’ ಈಗ ಅಧಿಕೃತವಾಗಿ ಘೋಷಣೆಯಾಗಿದೆ. ಚಿತ್ರತಂಡದ ಪ್ರಕಾರ ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ.

‘ಕಾಂಚನಾ’ ಸರಣಿಯ ಚಿತ್ರಗಳು ದಕ್ಷಿಣ ಭಾರತದಲ್ಲಷ್ಟೇ ಅಲ್ಲದೆ, ಬಾಲಿವುಡ್ ಸೇರಿ ಅನೇಕ ಭಾಷೆಗಳಲ್ಲಿ ರಿಮೇಕ್ ಆಗಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ. ಹೀಗಾಗಿ ಹೊಸ ಭಾಗದ ಮೇಲೂ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಯಿದೆ.

ಇದೀಗ ‘ಕಾಂಚನಾ 4’ ಗೆ ಬಾಲಿವುಡ್‌ನ ಹಾಟ್ ಬ್ಯೂಟಿ ನೋರಾ ಫತೇಹಿ ಎಂಟ್ರಿ ನೀಡಿದ್ದಾರೆ. ತಮ್ಮ ನೃತ್ಯ ಮತ್ತು ಗ್ಲಾಮರ್‌ನಿಂದ ಪ್ರೇಕ್ಷಕರ ಹೃದಯ ಗೆದ್ದಿರುವ ನೋರಾ, ಈ ಬಾರಿ ಚಿತ್ರದಲ್ಲಿ ಒಂದು ವಿಭಿನ್ನ ಹಾಗೂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಕ್ಕುಮೇಲೆ, ದಕ್ಷಿಣ ಭಾರತದ ಸುಂದರ ನಟಿ ಪೂಜಾ ಹೆಗ್ಡೆ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಅವರ ಪಾತ್ರದ ಕುರಿತಾಗಿ ಚಿತ್ರತಂಡ ಇನ್ನೂ ರಹಸ್ಯವನ್ನು ಉಳಿಸಿಕೊಂಡಿದ್ದು, ಶೀಘ್ರದಲ್ಲೇ ಅಧಿಕೃತ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.

ರಾಘವೇಂದ್ರ ಪ್ರೊಡಕ್ಷನ್ ಕಂಪನಿ ಈ ಹೊಸ ಯೋಜನೆ ಕುರಿತು ಘೋಷಣೆ ಮಾಡಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದೆ. ಭಯ ಮತ್ತು ಹಾಸ್ಯದ ಮಿಶ್ರಣದೊಂದಿಗೆ ಮತ್ತೆ ಪ್ರೇಕ್ಷಕರಿಗೆ ನಗು-ನಡುಕದ ಸಂಭ್ರಮ ನೀಡಲು ಸಜ್ಜಾಗಿರುವ ‘ಕಾಂಚನಾ 4’ ಈಗ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲದ ವಿಷಯವಾಗಿದೆ.

error: Content is protected !!