Saturday, October 4, 2025

CINE | ಜಗತ್ತಿನಾದ್ಯಂತ ಕಾಂತಾರ ಹೈ ಫೀವರ್: BookMyShowನಲ್ಲಿ ಗಂಟೆಗೆ 85 ಸಾವಿರ ಟಿಕೆಟ್ ಮಾರಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ-1 ಸಿನಿಮಾ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಕಾಂತಾರ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಕಾಂತಾರ ಸಿನಿಮಾ ಟಿಕೆಟ್ ಗಳೇ ಸಿಗುತ್ತಿಲ್ಲ.

ಪ್ರತಿಯೊಂದು ಗಂಟೆಗೆ 85 ಸಾವಿರ ಟಿಕೆಟ್ ಗಳು ಬುಕ್ ಮೈ ಷೋನಲ್ಲಿ ಬುಕ್ ಆಗುತ್ತಿವೆ. ಸಿನಿಮಾ ಟಿಕೆಟ್ ಬೆಲೆ ಕೆಲವೆಡೆ 1,200 ರೂಪಾಯಿ ಕೂಡ ಇದೆ. ಆದರೂ ಪ್ರೇಕ್ಷಕರು ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿದ್ದಾರೆ.

ಭಾರತದ ಸಿನಿಮಾ ಇತಿಹಾಸದಲ್ಲಿ ಯಾವುದೇ ಸಿನಿಮಾಗೂ ಕೂಡ ಇಷ್ಟೊಂದು ರೆಸ್ಪಾನ್ಸ್ ಇದುವರೆಗೂ ಸಿಕ್ಕಿಲ್ಲ. ಬೆಂಗಳೂರಿನ ಯಾವುದೇ ಥಿಯೇಟರ್, ಮಲ್ಟಿಪ್ಲೆಕ್ಸ್ ನಲ್ಲಿ ಕಾಂತಾರ-1ರ ಸಿನಿಮಾ ಟಿಕೆಟ್ ಗಳೇ ಸಿಗುತ್ತಿಲ್ಲ ಎನ್ನಲಾಗಿದೆ.