Tuesday, October 28, 2025

CINE | ಮದುವೆನೋ, ಹೊಸ ಸಿನಿಮಾನೋ? ಅ. 29ಕ್ಕೆ ಸೌತ್‌ ಬ್ಯೂಟಿಯ ಲೈಫ್‌ನಲ್ಲಿ ಏನಾಗ್ತಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಯಂಗ್ ಅಂಡ್ ಗ್ಲಾಮರಸ್ ನಟಿ ಜಾನ್ವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿರುವ “Save the Date 29th Oct” ಎಂಬ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು “ಜಾನ್ವಿ ಮದುವೆಯಾಗ್ತಾರಾ?” ಎಂಬ ಕುತೂಹಲದಲ್ಲಿ ಮುಳುಗಿದ್ದಾರೆ.

ದಿವಂಗತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾನ್ವಿ, ಇತ್ತೀಚೆಗೆ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿಯೂ ತಮ್ಮ ಅಭಿನಯದಿಂದ ಮೆಚ್ಚುಗೆ ಪಡೆದಿದ್ದಾರೆ. ‘ದೇವರ’ ಸಿನಿಮಾದ ಮೂಲಕ ದಕ್ಷಿಣಕ್ಕೆ ಪಾದಾರ್ಪಣೆ ಮಾಡಿದ ಅವರು, ಇದೀಗ ರಾಮ್ ಚರಣ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ, ಅವರ ವೈಯಕ್ತಿಕ ಜೀವನವೂ ಅಭಿಮಾನಿಗಳ ಗಮನ ಸೆಳೆದಿದೆ.

ಜಾನ್ವಿ ಈಗಾಗಲೇ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವುದು ಪಕ್ಕಾ ಸುದ್ದಿ. ಇಬ್ಬರು ಹಲವು ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.

ಹೀಗಿರುವಾಗ, “Save the Date 29th Oct” ಎಂಬ ಸಂದೇಶ ಪೋಸ್ಟ್ ಮಾಡಿರುವುದರಿಂದ ಅದು ಮದುವೆಯ ದಿನಾಂಕವೇ? ಅಥವಾ ಹೊಸ ಸಿನಿಮಾದ ಘೋಷಣೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

error: Content is protected !!