ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಈ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಬಗ್ಗೆ ಹೊಂಬಾಳೆ ಸಂಸ್ಥೆ ಸಿಹಿಸುದ್ದಿ ನೀಡಿದ್ದು, ಇದೇ ಸೆ.26 ರ ಮಧ್ಯಾಹ್ನ 12:29 ರಿಂದ ಕರ್ನಾಟಕದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಲಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 ಸಿನಿಮಾ ಟ್ರೈಲರ್ ರಿಲೀಸ್ ಮಾಡಿದೆ. ಇನ್ನೊಂದು ವಾರವಷ್ಟೇ ಬಾಕಿ ಇರುವ ಬೆನ್ನಲ್ಲೇ ಹೊಂಬಾಳೆ ಸಂಸ್ಥೆ ನೀಡಿರುವ ಸಿಹಿ ಸುದ್ದಿಗೆ ಅಭಿಮಾನಿಗಳು ಅಡ್ವಾನ್ಸ್ ಆಗಿ ಬುಕಿಂಗ್ ಮಾಡೋಕೆ ಸಿದ್ಧರಾಗಿದ್ದಾರೆ.