Sunday, December 14, 2025

CINE | ‘ಅಖಂಡ 2’ ಡಿಜಿಟಲ್ ರಿಲೀಸ್ ಬಗ್ಗೆ ಹೊಸ ಚರ್ಚೆ: OTTಯಲ್ಲಿ ಯಾವಾಗಿಂದ ನೋಡ್ಬಹುದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೊಡ್ಡ ನಿರೀಕ್ಷೆಗಳೊಂದಿಗೆ ಬಿಡುಗಡೆಯಾದ ‘ಅಖಂಡ 2’ ಸಿನಿಮಾ ಇದೀಗ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದೆ. ಥಿಯೇಟರ್‌ಗಳಲ್ಲಿ ಪ್ರದರ್ಶನ ಆರಂಭಿಸಿದ ಕೆಲವೇ ದಿನಗಳಲ್ಲಿ, ಚಿತ್ರದ ಡಿಜಿಟಲ್ ಬಿಡುಗಡೆ ಕುರಿತ ಮಾತುಗಳು ಜೋರಾಗುತ್ತಿವೆ. ನಟಸಿಂಹ ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ಬೋಯಪಾಟಿ ಶ್ರೀನು ಅವರ ಕಾಂಬಿನೇಷನ್‌ಗೆ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಇದ್ದು, ಈ ಸೀಕ್ವೆಲ್‌ನ ಓಟಿಟಿ ರಿಲೀಸ್ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಡಿಸೆಂಬರ್ 12ರಿಂದ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿರುವ ‘ಅಖಂಡ 2’ ಮೊದಲಿಗೆ ಡಿಸೆಂಬರ್ 5ರಂದು ಬಿಡುಗಡೆಯಾಗಬೇಕಿತ್ತು. ಆದರೆ ಹಣಕಾಸು ಸಂಬಂಧಿತ ಕಾರಣಗಳಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಇದೀಗ ಚಿತ್ರ ಪ್ರದರ್ಶನದಲ್ಲಿದ್ದರೂ, ಅದರ ಡಿಜಿಟಲ್ ಸ್ಟ್ರೀಮಿಂಗ್ ಕುರಿತ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಾಧ್ಯಮ ವರದಿಗಳ ಪ್ರಕಾರ, ‘ಅಖಂಡ 2’ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ. ಸಾಮಾನ್ಯವಾಗಿ ನಾಲ್ಕು ವಾರಗಳ ಥಿಯೇಟರ್-ಟು-ಓಟಿಟಿ ಅವಧಿಯನ್ನು ಗಮನಿಸಿದರೆ, 2026ರ ಜನವರಿ ಮೊದಲಾರ್ಧದಲ್ಲಿ ಸಿನಿಮಾ ಡಿಜಿಟಲ್ ವೇದಿಕೆಗೆ ಬರಬಹುದು ಎನ್ನಲಾಗಿದೆ. ಸಂಕ್ರಾಂತಿ ಅವಧಿವರೆಗೆ ಥಿಯೇಟರ್ ಪ್ರದರ್ಶನಕ್ಕೆ ಆದ್ಯತೆ ನೀಡುವ ತಂತ್ರವೂ ನಡೆಯುತ್ತಿದೆ ಎಂಬ ಮಾಹಿತಿ ಇದೆ.

ಚಿತ್ರದಲ್ಲಿ ಅಘೋರಿಯಾಗಿ ಬಾಲಯ್ಯ ಅವರ ಶಕ್ತಿಶಾಲಿ ಅಭಿನಯ ಮೆಚ್ಚುಗೆ ಪಡೆದಿದೆ. ಆದಿ ಪಿನಿಶೆಟ್ಟಿ ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದು, ಸಂಯುಕ್ತಾ ಮೆನನ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

error: Content is protected !!