ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ.
500 ಕೋಟಿ ರೂಪಾಯಿ ಕಲೆಕ್ಷನ್ ದಾಟಿ ಮುನ್ನಗ್ಗುತ್ತಿರುವ ಈ ಸ್ಪೈ ಥ್ರಿಲ್ಲರ್ ಚಿತ್ರ, ಕಥೆ ಮತ್ತು ತಾರಾಗಣದ ಜೊತೆಗೆ ಎಂಡ್ ಕ್ರೆಡಿಟ್‌ನಲ್ಲಿರುವ ಒಂದು ಹೆಸರಿನಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರ ನಿರ್ಮಾಣ ತಂಡದ ಪಟ್ಟಿಯಲ್ಲಿ ‘ರಾಹುಲ್ ಗಾಂಧಿ’ ಎಂಬ ಹೆಸರು ಕಾಣಿಸಿಕೊಂಡಿರುವುದು ನೆಟ್ಟಿಗರಲ್ಲಿ ಗೊಂದಲ ಮತ್ತು ಕುತೂಹಲ ಹುಟ್ಟಿಸಿದೆ.
ಎಂಡ್ ಕ್ರೆಡಿಟ್ ಸೀನ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗುತ್ತಿದ್ದಂತೆ, ಇದು ವಿಪಕ್ಷ ನಾಯಕ ರಾಹುಲ್ ಗಾಂಧಿಯೇನಾ ಎಂಬ ಪ್ರಶ್ನೆಗಳು ಹರಡಿದವು. ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಲೇವಡಿ ಮಾಡಿದರು. ಆದರೆ ವಾಸ್ತವದಲ್ಲಿ, ಈ ರಾಹುಲ್ ಗಾಂಧಿಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ಬಾಲಿವುಡ್‌ನ ಅನುಭವಿ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿದ್ದು, ‘ರುಸ್ತುಂ’, ‘ಫ್ಯಾಮಿಲಿ ಮ್ಯಾನ್’, ‘ರಾಕೆಟ್ ಬಾಯ್ಸ್’ ಸೇರಿದಂತೆ ಹಲವು ಸಿನಿಮಾ ಮತ್ತು ವೆಬ್ ಸೀರಿಸ್‌ಗಳಿಗೆ ಹಣ ಹೂಡಿರುವವರು.

