ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಕಥಾ ಸಂಗ್ರಹ ಚಿತ್ರಗಳಿಗೆ ತನ್ನದೇ ಆದ ಸ್ಥಾನವಿದೆ. ಪುಟ್ಟಣ್ಣ ಕಣಗಾಲ್ ಅವರ ‘ಕಥಾ ಸಂಗಮ’ದಿಂದ ಆರಂಭವಾದ ಈ ಪ್ರಯೋಗ, ಕಾಲಕ್ರಮೇಣ ಹೊಸ ರೂಪಗಳನ್ನು ಪಡೆದುಕೊಂಡಿದೆ. ಇದೀಗ ಅದೇ ಹಾದಿಯಲ್ಲಿ ‘ಏಕಂ’ ಹೆಸರಿನ ವೆಬ್ ಸೀರಿಸ್ ಒಟಿಟಿಗೆ ಕಾಲಿಟ್ಟಿದ್ದು, ಏಳು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ರಿಷಬ್ ಶೆಟ್ಟಿ ನಿರ್ಮಾಣದ ಈ ಕಥಾ ಸರಣಿ ಜನವರಿ 9ರಿಂದ ಜೀ5 ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ರಾಜ್ ಬಿ. ಶೆಟ್ಟಿ, ಪ್ರಕಾಶ್ ರೈ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಹಿನ್ನೆಲೆಯ ದೃಶ್ಯ ವೈಭವ ಈ ಸೀರಿಸ್‌ನ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು, ಪ್ರಕೃತಿಯ ಸೌಂದರ್ಯವನ್ನು ಮನಮೋಹಕವಾಗಿ ತೆರೆದಿಟ್ಟಿದೆ.
ಇದನ್ನೂ ಓದಿ: FOOD | ಎಂದಾದರೂ ಕ್ಯಾರೆಟ್ ಪಾಯಸ ಸವಿದಿದ್ದೀರಾ? ರೆಸಿಪಿ ವೆರಿ ಸಿಂಪಲ್
ಸಂಗೀತವೂ ಕಥೆಗಳ ಭಾವಕ್ಕೆ ತಕ್ಕಂತೆ ಹೊಂದಿಕೊಂಡಿದ್ದು, ಪ್ರತಿ ಎಪಿಸೋಡ್‌ಗೆ ಸೂಕ್ತವಾದ ಹಿನ್ನೆಲೆ ಸಂಗೀತ ಅನುಭವವನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಏಳು ಕಥೆಗಳೂ ವಿಭಿನ್ನ ಸ್ವಭಾವ ಹೊಂದಿರುವುದರಿಂದ ಎಲ್ಲೂ ಬೋರ್ ಅನಿಸುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಆದರೆ, ಸೀರಿಸ್‌ನ ಪ್ರಮುಖ ಮೈನಸ್ ಅಂಶ ಅದರ ನಿಧಾನಗತಿ. ಕೆಲ ಕಥೆಗಳು ಹೆಚ್ಚು ಸ್ಲೋ ಆಗಿವೆ ಎಂಬ ಟೀಕೆ ಕೂಡ ಕೇಳಿಬರುತ್ತಿದೆ. ಕಲಾತ್ಮಕ, ಆಳವಾದ ಕಥನ ಇಷ್ಟಪಡುವವರಿಗೆ ‘ಏಕಂ’ ಒಳ್ಳೆಯ ಆಯ್ಕೆ. ಮನರಂಜನೆಯೊಂದಿಗೆ ಅರ್ಥಪೂರ್ಣ ಅನುಭವ ಹುಡುಕುವ ಒಟಿಟಿ ಪ್ರೇಕ್ಷಕರು ಈ ಸೀರಿಸ್‌ಗೆ ಒಮ್ಮೆ ಅವಕಾಶ ನೀಡಬಹುದು.

