ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆಯೊಂದಿಗೆ ತೆರೆಕಂಡ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಬಿಡುಗಡೆಯಾಗಿ 12 ದಿನಗಳನ್ನು ಪೂರೈಸಿದ್ದು, ಬಾಕ್ಸ್ ಆಫೀಸ್ ಪಯಣ ಈಗ ನಿಧಾನಗೊಂಡಿದೆ. ಆರಂಭದ ಮೂರು ದಿನಗಳಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿದ್ದ ಚಿತ್ರ, ನಂತರ ಕ್ರಮೇಣ ಪ್ರೇಕ್ಷಕರ ಆಸಕ್ತಿ ಕಳೆದುಕೊಳ್ಳುತ್ತಿರುವುದು ಕಲೆಕ್ಷನ್ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ. ಒಂದು ಹಂತದಲ್ಲಿ ಫ್ಯಾನ್ಸ್ ಕೂಡ ಚಿತ್ರ ವೀಕ್ಷಣೆಯಿಂದ ದೂರ ಉಳಿದರೇ ಎಂಬ ಚರ್ಚೆ ಶುರುವಾಗಿದೆ.
ವರದಿಗಳ ಪ್ರಕಾರ, ‘ದಿ ಡೆವಿಲ್’ ಸಿನಿಮಾ ಭಾರತದಲ್ಲಿ ಸುಮಾರು 33 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಗಳಿಸಿದೆ. ನೆಟ್ ಕಲೆಕ್ಷನ್ 27.93 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ ಎನ್ನಲಾಗುತ್ತಿದೆ. ಆದರೆ, ಲೈಫ್‌ಟೈಮ್ ಕಲೆಕ್ಷನ್ ಎಷ್ಟಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಡಿಸೆಂಬರ್ 22ರಂದು, ಅಂದರೆ 12ನೇ ದಿನ, ಈ ಸಿನಿಮಾ ಕೇವಲ 33 ಲಕ್ಷ ರೂಪಾಯಿ ಮಾತ್ರ ಗಳಿಕೆ ಮಾಡಿದೆ. ರಿಲೀಸ್ ಆದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಕಲೆಕ್ಷನ್ ದಾಖಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗಲಿರುವುದರಿಂದ ‘ದಿ ಡೆವಿಲ್’ಗೆ ಸಿಕ್ಕಿರುವ ಪ್ರದರ್ಶನಗಳ ಸಂಖ್ಯೆಯೂ ಕಡಿಮೆಯಾಗುವ ಸಾಧ್ಯತೆ ಇದೆ.
ಚಿತ್ರದ ಕಲೆಕ್ಷನ್ ಬಗ್ಗೆ ನಿರ್ಮಾಣ ತಂಡ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ದರ್ಶನ್ ಜೈಲಿನಲ್ಲಿ ಇರುವಾಗಲೇ ಸಿನಿಮಾ ತೆರೆಕಂಡಿದ್ದರೂ, ನಿರೀಕ್ಷಿಸಿದ ಮಟ್ಟದ ಬಿಸ್ನೆಸ್ ಆಗದಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ. ಪೈರಸಿ ಲಿಂಕ್‌ಗಳ ಹರಡಿಕೆ ಕೂಡ ಚಿತ್ರದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

