Thursday, September 4, 2025

CINE | ಬಿಗ್ ಸ್ಕ್ರೀನ್ ಮೇಲೆ ಮತ್ತೊಮ್ಮೆ ಮ್ಯಾಜಿಕ್ ಮಾಡೋಕೆ ಬರ್ತಿದ್ದಾರೆ ರೋಮ್ಯಾಂಟಿಕ್ ಜೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇವರಿಬ್ಬರು ಒಟ್ಟಿಗೆ ನಟಿಸಿದ್ದು ಎರಡೇ ಸಿನಿಮಾ ಆದ್ರೂ ಈ ಜೋಡಿ ತೆರೆಮೇಲೆ ಒಟ್ಟಿಗೆ ಕಾಣಿಸ್ಕೊಂಡಾಗ ಮ್ಯಾಜಿಕ್ ಆಗೋದು ಪಕ್ಕಾ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಟಾಲಿವುಡ್‌ನ ಹಾಟ್ ಕಪಲ್. ಇದೇ ಜೋಡಿ ಇದೀಗ 3ನೇ ಬಾರಿ ಆನ್‌ಸ್ಕ್ರೀನ್‌ ಜೋಡಿಯಾಗಿ ಕಾಣಿಸ್ಕೊಳ್ಳಲು ರೆಡಿಯಾಗಿದ್ದಾರೆ.

ತೆಲುಗಿನ ರಾಹುಲ್ ಸಂಕೃತ್ಯ ನಿರ್ದೇಶನದಲ್ಲಿ ಮುಂಬರುವ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೆ ತೆರೆಯ ಮೇಲೆ ಒಂದಾಗಲಿದ್ದಾರೆ. ಈ ಬಾರಿ 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯಲ್ಲಿ ಈ ಜೋಡಿ ಪರದೆ ಹಂಚಿಕೊಳ್ಳಲಿದ್ದಾರೆ. ಇದು ಐತಿಹಾಸಿಕ ಕಥೆಯಾಗಿರುವುದು ವಿಶೇಷ.

ನಟ ವಿಜಯ್ ದೇವರಕೊಂಡ ಆಂಧ್ರದ ರಾಯಲುಸೀಮೆಯ ಹಳ್ಳಿಗಾಡಿನ ಪಾತ್ರವನ್ನು ನಿರ್ವಹಿಸುವ ನಿರೀಕ್ಷೆ ಇದೆ. ಇದು ಅವರ ವೃತ್ತಿಜೀವನದಲ್ಲಿ ಮೊದಲ ಪ್ರಯತ್ನ. ರಶ್ಮಿಕಾ ಕೂಡ ವಿಭಿನ್ನ ಪಾತ್ರದಲ್ಲೇ ಕಾಣಿಸ್ಕೊಳ್ಳಲಿದ್ದಾರೆ.

ಇದನ್ನೂ ಓದಿ