Saturday, October 11, 2025

CINE | 25 ವರ್ಷಗಳ ಬಳಿಕ ರಿ-ರಿಲೀಸ್ ಆಗ್ತಿದೆ ‘ಉಪೇಂದ್ರ’: ಆದ್ರೆ ಕನ್ನಡದಲ್ಲಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

1999 ರಲ್ಲಿ ಬಿಡುಗಡೆಯಾದ ಉಪೇಂದ್ರ ನಿರ್ದೇಶನದ ಕನ್ನಡ ಸಿನಿಮಾ ‘ಉಪೇಂದ್ರ’ 25 ವರ್ಷಗಳನ್ನು ಪೂರ್ಣಗೊಳಿಸಿದೆ. ಮನೋವೈಜ್ಞಾನಿಕ ಥ್ರಿಲ್ಲರ್ ಶೈಲಿಯ ಈ ಚಿತ್ರವು ಬಿಡುಗಡೆಯಾದ ವೇಳೆಯೇ ತಮ್ಮದೇ ಆದ ಛಾಪು ಮೂಡಿಸಿತ್ತು. ಈ ಯಶಸ್ಸಿನ ಹಿನ್ನೆಲೆ, ಪಾತ್ರಗಳ ಸಂಕೀರ್ಣ ಸಂಬಂಧ ಮತ್ತು ಸಾಹಿತ್ಯದ ವಿಶಿಷ್ಟತೆಯು ಇದನ್ನು ಸಾಂಪ್ರದಾಯಿಕ ಚಿತ್ರಗಳಿಂದ ವಿಭಿನ್ನಗೊಳಿಸಿತ್ತು. ಹೀಗಾಗಿ ಇದೇ ತಿಂಗಳು 11 ರಂದು ಉಪೇಂದ್ರ ತೆಲುಗು ವರ್ಷನ್ ರಿಲೀಸ್ ಆಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ತೆಲುಗು ಟ್ರೈಲರ್ ಕೂಡ ಈಗಾಗಲೇ ವೈರಲ್ ಆಗುತ್ತಿದೆ.

ಉಪೇಂದ್ರ ಕನ್ನಡದ ಮನೋವೈಜ್ಞಾನಿಕ ಥ್ರಿಲ್ಲರ್ ಚಿತ್ರವಾಗಿದ್ದು, ಉಪೇಂದ್ರ, ರವೀನಾ ಟಂಡನ್, ಪ್ರೇಮ, ದಾಮಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರ ಮತ್ತು ನಾಯಕನ ಪಾತ್ರದ ನಡುವಿನ ಸಂಬಂಧದ ಮೂಲಕ ವಿವಿಧ ಮಾನವ ಭಾವನೆಗಳನ್ನು ಅನ್ವೇಷಿಸಲಾಗಿದೆ. ಉಪೇಂದ್ರ ಚಿತ್ರಕ್ಕೆ ತನ್ನ ಸಾಹಿತಿಯನ್ನು ಬರೆಯುತ್ತಲೇ ನಿರ್ದೇಶನವನ್ನು ನೆರವೇರಿಸಿದ್ದಾರೆ ನಟ ಉಪೇಂದ್ರ. ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ .

ಈ ಚಿತ್ರವು ಫಿಲ್ಮ್‌ಫೇರ್ ಅತ್ಯುತ್ತಮ ಚಿತ್ರ (ಕನ್ನಡ) ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ (ಕನ್ನಡ) ಪ್ರಶಸ್ತಿಗಳನ್ನು ಗೆದ್ದಿದೆ. 30ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಉಪೇಂದ್ರ, 2001 ರಲ್ಲಿ ಜಪಾನ್‌ನ ಯುಬಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿತು. 2015 ರಲ್ಲಿ ಉಪೇಂದ್ರ 2 ಶೀರ್ಷಿಕೆಯ ಸೀಕ್ವೆಲ್ ಬಿಡುಗಡೆಯಾಯಿತು.

error: Content is protected !!