Friday, September 19, 2025

CINE | ಉಪೇಂದ್ರ ಹುಟ್ಟುಹಬ್ಬದ ಸ್ಪೆಷಲ್: ‘ಗೆರಿಲ್ಲಾ ವಾರ್’ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಉಪೇಂದ್ರ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 18ರಂದು ಅಂದರೆ ಇಂದು ನಡೆಯಲಿದೆ. ಆದರೆ ಅಭಿಮಾನಿಗಳಿಗೆ ಒಂದು ದಿನ ಮುಂಚೆಯೇ ವಿಶೇಷ ಉಡುಗೊರೆ ಸಿಕ್ಕಿದೆ. ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್, ಉಪೇಂದ್ರ ಅವರ ಹೊಸ ಸಿನಿಮಾದ ಘೋಷಣೆ ಮಾಡಿ, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

‘ಗೆರಿಲ್ಲಾ ವಾರ್’ ಹೆಸರಿನ ಈ ಹೊಸ ಸಿನಿಮಾದಲ್ಲಿ ಉಪೇಂದ್ರ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಲಿಟರಿ ಆಪರೇಷನ್‌ ಹಿನ್ನೆಲೆಯ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಉಪೇಂದ್ರ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸೈನಿಕ ಸಮವಸ್ತ್ರದಲ್ಲಿ ಮಿಂಚುತ್ತಿರುವ ಪೋಸ್ಟರ್ ಈಗಾಗಲೇ ಕುತೂಹಲ ಹುಟ್ಟಿಸಿದೆ.

ಈ ಚಿತ್ರವು ನಿರ್ದೇಶಕ ಓಂಪ್ರಕಾಶ್ ರಾವ್ ಅವರ 50ನೇ ಸಿನಿಮಾ ಎಂಬ ವಿಶೇಷತೆಯೂ ಹೊಂದಿದೆ. ಉಪೇಂದ್ರ ಮತ್ತು ಓಂಪ್ರಕಾಶ್ ರಾವ್ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇನ್ನೂ ಬಿಡುಗಡೆಯಾಗಬೇಕಿರುವ ತ್ರಿಶೂಲಂಗೂ ಮುನ್ನವೇ ಗೆರಿಲ್ಲಾ ವಾರ್ ಘೋಷಣೆ ಅಭಿಮಾನಿಗಳಲ್ಲಿ ಹೆಚ್ಚುವರಿ ನಿರೀಕ್ಷೆ ಮೂಡಿಸಿದೆ.

ಚಿತ್ರವನ್ನು ಎನ್ ಎಸ್ ರಾವ್ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಉಪೇಂದ್ರಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದು, ರಂಗಾಯಣ ರಘು ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ