ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಜಾನ್ಹವಿ ಕಪೂರ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಪರಮ್ ಸುಂದರಿ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ಆಗೋಕು ಮುನ್ನವೇ ಸಾಕಷ್ಟು ಸಮಸ್ಯೆಯನ್ನು ಸಿನಿ ತಂಡ ಅನುಭವಿಸುತ್ತಿದೆ.
‘ಪರಮ ಸುಂದರಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಮಲಯಾಳಿ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಉತ್ತರ ಭಾರತದ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ನಡುವೆ ಪ್ರೀತಿಯಾಗಿ, ಮದುವೆ ಆಗುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾ ಇನ್ನು ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಆದರೆ ಸಿನಿಮಾಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಮೊದಲಿಗೆ ಸಿನಿಮಾದ ನಾಯಕಿ ಜಾನ್ಹವಿ ಕಪೂರ್ ಅವರ ಆಖ್ಸೆಂಟ್ ಬಗ್ಗೆ ಟೀಕೆ ವ್ಯಕ್ತವಾಗಿದೆ. ಮಲಯಾಳಿ ಯುವತಿಯ ಪಾತ್ರದಲ್ಲಿ ನಟಿಸಿರುವ ಜಾನ್ಹವಿ ಕಪೂರ್, ತುಸುವೂ ಸಹ ಮಲಯಾಳಿ ರೀತಿ ಕಾಣುತ್ತಿಲ್ಲವೆಂದು ಹಾಗೂ ಜಾನ್ಹವಿಯ ಮಾತನಾಡುವ ವಿಧಾನವಂತೂ ತುಸುವೂ ಸಹ ಮಲಯಾಳಿಯನ್ನು ಹೋಲುವುದಿಲ್ಲ ಎಂದು ಮಲಯಾಳಿಗರೇ ಟೀಕೆ ಮಾಡಿದ್ದಾರೆ. ಒಂದು ಪಾತ್ರದಲ್ಲಿ ನಟಿಸುವಾಗ ತುಸುವಾದರೂ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳಬೇಕು ಆದರೆ ಜಾನ್ಹವಿ ಆ ರೀತಿಯ ಯಾವುದೇ ತಯಾರಿ ಮಾಡಿಲ್ಲವೆಂಬುದು ತಿಳಿಯುತ್ತಿದೆ ಎಂದು ಟೀಕೆ ಮಾಡಲಾಗಿದೆ.
ಇಷ್ಟೇ ಅಲ್ಲದೆ ಈ ಸಿನಿಮಾ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್‌ಪ್ರೆಸ್ ರೀತಿಯೇ ಕಾಣುತ್ತಿದೆ. ಇದು ಕಾಪಿ ಸಿನಿಮಾ ಎಂದು ಕೂಡ ಹೇಳಲಾಗುತ್ತಿದೆ. ಸದ್ಯ ಪರಮ್ ಸುಂದರಿ ಸಿನಿಮಾದ ಹಾಡುಗಳು ಜನರ ಮನಸ್ಸಿಗೆ ಇಷ್ಟವಾಗಿದೆ.