ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಂಡನ್‌ಬರ್ಗ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ.
ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿ ರೂ. ಏರಿಕೆಯಾಗಿದ್ದು ಈಗ ಒಟ್ಟು ಕಂಪನಿಗಳ ಮೌಲ್ಯ 13.96 ಲಕ್ಷ ಕೋಟಿ ರೂ.ಗೆ ತಲುಪಿದೆ.
ಪವರ್ – 13.42% (84.75ರೂ.), ಟೋಟಲ್ ಗ್ಯಾಸ್ – 7.55% (45.85 ರೂ.), ಅದಾನಿ ಎಂಟರ್‌ಪ್ರೈಸಸ್ -5.25% (126 ರೂ.), ಗ್ರೀನ್ ಎನರ್ಜಿ -5.48% (53.60 ರೂ.), ಅದಾನಿ ಎನರ್ಜಿ ಸಲ್ಯೂಷನ್ಸ್ – 4.94% (41.35 ರೂ.), ಅದಾನಿ ಪೋರ್ಟ್ಸ್- 1.15% (16.20 ರೂ.) ಭಾರೀ ಏರಿಕೆ ಕಂಡಿದೆ. ಇದರ ಜೊತೆ ಎಸಿಸಿ, ಅಂಬುಜಾ ಸಿಮೆಂಟ್‌ಗಳ ಷೇರುಗಳ ಮೌಲ್ಯವೂ ಏರಿದೆ.
ಹಿಂಡನ್‌ಬರ್ಗ್ ಆರೋಪದಿಂದ ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಅದಾನಿ ಕಂಪನಿಗಳ ಷೇರು ಖರೀದಿಸಲು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಸೆಬಿಯಿಂದ ಕ್ಲೀನ್‌ಚಿಟ್ ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆ ಮಾಡಲು ಆರಂಭಿಸಿದ್ದರಿಂದ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ.
ಹಿಂಡನ್‌ಬರ್ಗ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ತನಿಖೆ ನಡೆಸಿ ಅದಾನಿ ಕಂಪನಿ ಕ್ಲೀನ್ ಚಿಟ್ ನೀಡಿತ್ತು.