ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಯಾನಗರಿ ಮುಂಬೈನಲ್ಲಿ ಶ್ರೀ ಗಣೇಶೋತ್ಸವದ ಸಂಭ್ರಮಕ್ಕೆ ತೆರೆ ಬೀಳುತ್ತಿದ್ದಂತೆಯೇ ಭಾನುವಾರ ಹಲವು ಸಾಮಾಜಿಕ ಹಾಗೂ ಪರಿಸರ ಸಂಘಟನೆಗಳು ಒಟ್ಟುಗೂಡಿ ಗಣೇಶನ ಮೂರ್ತಿ ಜಲಸ್ತಂಭನಗೊಂಡ ಸಮುದ್ರ ತೀರದ ಸ್ವಚ್ಛತೆ ಹಾಗೂ ಜಲಮೂಲಗಳ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತ ಫಡ್ನವೀಸ್, ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಸ್ವಚ್ಛತಾ ಶ್ರಮದಾನದಲ್ಲಿ ಭಾಗಿಯಾದರು. ಹಬ್ಬಗಳನ್ನು ಆಚರಿಸುವುದು ನಮ್ಮ ಸಂಪ್ರದಾಯದ ಪರಂಪರೆಯಾಗಿದ್ದು ಹಬ್ಬದ ಬಳಿಕ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಮಹತ್ವ ಪಡೆದಿದೆ ಎಂದು ಈ ವೇಳೆ ಪರಿಸರ ಆಸಕ್ತರು ಹೇಳಿದರು.
ಗಣಪನ ಹಬ್ಬ ಬಳಿಕ ಜಲಮೂಲ ಸ್ವಚ್ಛತೆ: ನಟ ಅಕ್ಷಯ್, ಸಿಎಂ ಫಡ್ನವೀಸ್ ಪತ್ನಿ ಸಹಿತ ಪರಿಸರಾಸಕ್ತರ ಸಾಥ್
