Sunday, October 12, 2025

ಪ್ರತಾಪ್ ಸಿಂಹ, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ: ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಬಾನು ಮುಷ್ತಾಕ್ ಅವರನ್ನ ಚಾಮುಂಡಿ ಬೆಟ್ಟ ಹತ್ತಬಾರದು ಅಂತಾರೆ. ಪೂಜೆ ಮಾಡಬಾರದು ಅಂತಾರೆ. ನನಗೆ ಅರ್ಥ ಆಗಲ್ಲ. ನಾವು ಜಾತ್ಯಾತೀತ ವ್ಯವಸ್ಥೆಯಲ್ಲಿ ಇದ್ದೇವೆ. ಸಂವಿಧಾನ ಸಮಾನತೆ ಅಂತ ಹೇಳುತ್ತದೆ. ಅಂಬೇಡ್ಕರ್ ಇದನ್ನೇ ಹೇಳುತ್ತಾರೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನ ಸಮಾಜ ಖಂಡಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಲೋಕಸಭೆ ಸದಸ್ಯನಿಗೆ ಸಂವಿಧಾನ ಗೊತ್ತಿಲ್ಲ ಅಂದರೆ ಏನು ಹೇಳಬೇಕು? ಮೂರ್ಖ ಅಂತ ಕರೆಯಬೇಕು. ಇಂತಹ ಮೂರ್ಖರು ನಮ್ನ ದೇಶದಲ್ಲಿ ಇದ್ದಾರೆ. ಇಂತಹ ಮೂರ್ಖರ ಬಗ್ಗೆ ಮಾತಾಡೋದು ಬೇಡ ಎಂದು ಕಟುವಾಗಿ ಖಂಡಿಸಿದ್ದಾರೆ

error: Content is protected !!