Sunday, October 12, 2025

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

ಬೆಂಗಳೂರು ಮೆಟ್ರೋಗೆ ವಾಲ್ಮಿಕಿ ಹೆಸರು ನಾಮಕರಣ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಎರಡೂ ಮೆಟ್ರೋವನ್ನು ನಡೆಸುತ್ತಿವೆ. ಹೀಗಾಗಿ ನಾನು ಅದನ್ನು ಶಿಫಾರಸು ಮಾಡುತ್ತೇನೆ. ಕೇಂದ್ರವು ಒಪ್ಪಿಕೊಳ್ಳಬೇಕು. ಏನಾಗುತ್ತದೆ ಎಂದು ಕಾದು ನೋಡಬೇಕು ಎಂದಿದ್ದಾರೆ.

ಪಠ್ಯಪುಸ್ತಕಗಳಲ್ಲಿ ವಾಲ್ಮೀಕಿ ಮತ್ತು ರಾಮಾಯಣವನ್ನು ಸೇರಿಸುವ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಅವರ ಸಲಹೆಯನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

error: Content is protected !!