ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಈಗಾಗಲೇ ಕಲರ್ಸ್ ಮೊದಲ ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಪರ್ಧಿಗಳ ನಡವಳಿಕೆಯಿಂದ ಸುದೀಪ್ ಗರಂ ಆಗಿದ್ದಾರೆ.
ಗೇಮ್ ಪ್ಲ್ಯಾನ್, ಸ್ಟ್ರಾಟರ್ಜಿ ಏನೂ ಇಲ್ಲ ನಿಮ್ಮಲ್ಲಿ ಎಂದು ಕೋಪಗೊಂಡಿದ್ದಾರೆ. ಇದರ ಜೊತೆಗೆ ಇಂದು ಮತ್ತೊಂದು ಟ್ವಿಸ್ಟ್ ಇರಲಿದೆ. ಮೊದಲ ದಿನ ಎಲಿಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿ ಇಂದು ಪುನಃ ಮನೆ ಸೇರಿದ್ದಾರೆ.
ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆದರು. ಮೊದಲ ದಿನವೇ ಬಿಗ್ ಬಾಸ್ನಲ್ಲಿ ಎಲಿಮಿನೇಷನ್ ಇರುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಇದ್ದರೂ ಇದೊಂದು ಗಿಮಿಕ್ ಆಗಿರಬಹುದೆಂದು ಅಂದುಕೊಂಡಿದ್ದರು. ಆದರೆ, ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ತಾಣಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎಂದು ಪ್ರಕಟಿಸುವ ಮೂಲಕ ಶಾಕ್ ನೀಡಿತ್ತು. ಇದನ್ನ ಕಂಡು ಅವರ ಫ್ಯಾನ್ಸ್ ಕೂಡ ಸಿಟ್ಟಾಗಿದ್ದರು.
ರಕ್ಷಿತಾಗೆ ಅವಮಾನ ಮಾಡಲಾಗಿದೆ..ಈರೀತಿ ಎಲಿಮಿನೇಷನ್ ಮಾಡಕೂಡದು ಎಂದು ಹೇಳಿದ್ದರು. ಸೋಷಿಯಲ್ ಮೀಡಿಯಾದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಜಯಪ್ರಕಾಶ್ ಗೌಡ ಅವರು, ‘ಕರ್ದು ಅವಮಾನ ಮಾಡೋದು ಎಷ್ಟು ಸರಿ, ಇದು ನಿಮಗೆ ಸರಿ ಅನಿಸುತ್ತಿದೆಯೇ?’ ಎಂದು ಹೇಳಿದ್ದರು.