Monday, October 13, 2025

ಟಿವಿಕೆ ಸಮಾವೇಶಕ್ಕೆ ಷರತ್ತು: ಡಿಎಂಕೆ ಸರ್ಕಾರದ ವಿರುದ್ಧ ನಟ ವಿಜಯ್ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಮಾವೇಶ ಮತ್ತು ಸಭೆಗಳಿಗೆ ಹಲವು ಷರತ್ತುಗಳನ್ನು ವಿಧಿಸಿದ ಡಿಎಂಕೆ ಸರ್ಕಾರದ ವಿರುದ್ಧ ಟಿವಿಕೆ ಪಕ್ಷದ ಸಂಸ್ಥಾಪಕ, ನಟ ವಿಜಯ್ ವಾಗ್ದಾಳಿ ನಡೆಸಿದ್ದು, ಇದೇ ರೀತಿ ಷರತ್ತುಗಳನ್ನು ಪ್ರಧಾನಿ ಅಥವಾ ಗೃಹ ಸಚಿವರ ಭೇಟಿ ವೇಳೆ ವಿಧಿಸಲು ಸರ್ಕಾರ ಧೈರ್ಯ ಮಾಡುತ್ತದೆಯಾ ಎಂದು ಪ್ರಶ್ನಿಸಿದ್ದಾರೆ.

ಪುತುರ್​ನಲ್ಲಿ ಬೃಹತ್​ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ಕಾರ್ಯಕ್ರಮಗಳಿಗೆ ಹಲವು ಷರತ್ತುಗಳನ್ನು ವಿಧಿಸಲಾಗುತ್ತಿದೆ. ನನ್ನ ಕೈಯನ್ನು ಅಲುಗಾಡಿಸಲಾಗುತ್ತಿಲ್ಲ. ಜನರನ್ನು ಭೇಟಿ ಮಾಡಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಉದ್ದೇಶ ಸ್ಪಷ್ಟವಾಗಿದೆ. 2026ರ ವಿಧಾನಸಭೆ ಚುನಾವಣೆ ಡಿಎಂಕೆ ಮತ್ತು ಟಿವಿಕೆ ನಡುವೆ ಮಾತ್ರ ನಡೆಯುತ್ತೆ. ಈ ರೀತಿಯ ಬೆದರಿಕೆಗೆ ಟಿವಿಕೆ ಬಗ್ಗುವುದಿಲ್ಲ, ಜನರ ಬೃಹತ್​ ಬೆಂಬಲ ನಮಗೆ ಇದೆ ಎಂದು ವಿಜಯ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಿರುಚುರಪಳ್ಳಿಯ ಸಭೆಯಲ್ಲಿ ಸ್ಪೀಕರ್​ ವೈರ್​ ಕಟ್​​ ಮಾಡಲಾಯಿತು. ಅರಿಯಲೂರು ಕಾರ್ಯಕ್ರಮದಲ್ಲಿ ವಿದ್ಯುತ್​ ಸಮಸ್ಯೆ ಮಾಡಲಾಯಿತು. ಇದರಿಂದ ಕೇವಲ ಮೂರು ನಿಮಿಷಗಳ ಕಾಲ ಮಾತ್ರ ರಾಜಕೀಯ ಸಭೆಯಲ್ಲಿ ಮಾತನಾಡಲಾಯಿತು. ಇದೇ ರೀತಿಯ ಸಮಸ್ಯೆ ನರೇಂದ್ರ ಮೋದಿ ಅಥವಾ ಅಮಿತ್​ ಶಾ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಧಿಸಿದರೆ ಏನಾಗಲಿದೆ ನೋಡಿ ಎಂದರು

error: Content is protected !!