Saturday, December 20, 2025

ಅಪ್ಪನ ಎತ್ತರ, ಅಮ್ಮನ ಹೋಲಿಕೆ.. ದರ್ಶನ್ ಪುತ್ರ ಈಗ ಅಪ್ಪಟ ‘ಜೂನಿಯರ್ ಚಾಲೆಂಜಿಂಗ್ ಸ್ಟಾರ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ‘ನಟ ದರ್ಶನ್ ಮತ್ತು ಅವರ ಪುತ್ರ ವಿನೀಶ್ ನಡುವಿನ ಸ್ನೇಹಮಯ ಬಾಂಧವ್ಯ ಕೇವಲ ಮನೆಗಷ್ಟೇ ಸೀಮಿತವಾಗಿಲ್ಲ, ಅದು ಈಗ ಶೂಟಿಂಗ್ ಸೆಟ್‌ಗಳಿಗೂ ವಿಸ್ತರಿಸಿದೆ. ಮಗನನ್ನು ಕೇವಲ ಪುತ್ರನಂತೆ ನೋಡದೆ ಒಬ್ಬ ಆತ್ಮೀಯ ಗೆಳೆಯನಂತೆ ಕಾಣುವ ದರ್ಶನ್, ತಮ್ಮ ಕೆಲಸದ ನಡುವೆಯೂ ವಿನೀಶ್ ಜೊತೆ ಸಮಯ ಕಳೆಯುವುದನ್ನು ಮರೆಯುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋವೊಂದು ಸಖತ್ ಸದ್ದು ಮಾಡುತ್ತಿದೆ.

ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ರಾಜಸ್ಥಾನದ ಸುಡು ಬಿಸಿಲಿನಲ್ಲಿ ಬೀಡುಬಿಟ್ಟಿತ್ತು. ಈ ವೇಳೆ ತಂದೆಯ ಜೊತೆ ವಿನೀಶ್ ಕೂಡ ಸಾಥ್ ನೀಡಿದ್ದರು. ಅಪ್ಪನಂತೆಯೇ ಸ್ಟೈಲಿಶ್ ಶರ್ಟ್ ಧರಿಸಿ, ಅದೇ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ವಿನೀಶ್ ಫೋಟೋಗಳು ಈಗ ಅಭಿಮಾನಿಗಳ ಕಣ್ಮನ ಸೆಳೆಯುತ್ತಿವೆ.

ವಿನೀಶ್ ಅವರನ್ನು ನೋಡಿದವರು ಅಚ್ಚರಿ ವ್ಯಕ್ತಪಡಿಸುತ್ತಿರುವುದು ಅವರ ಬೆಳವಣಿಗೆಯ ಬಗ್ಗೆ. ನೋಟದಲ್ಲಿ ತಾಯಿ ವಿಜಯಲಕ್ಷ್ಮೀ ಅವರ ಹೋಲಿಕೆ ಇದ್ದರೂ, ದೃಢವಾದ ಮೈಕಟ್ಟು ಮತ್ತು ಎತ್ತರದಲ್ಲಿ ಅವರು ತಂದೆ ದರ್ಶನ್ ಅವರನ್ನೇ ಹೋಲುತ್ತಿದ್ದಾರೆ. ತಂದೆಯಂತೆಯೇ ಕಟ್ಟುಮಸ್ತಾಗಿ ಕಾಣುವ ವಿನೀಶ್, ಭವಿಷ್ಯದ ಸ್ಟಾರ್ ಎಂಬ ಸೂಚನೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ, ‘ಡೆವಿಲ್’ ಚಿತ್ರತಂಡ ಹಂಚಿಕೊಂಡಿರುವ ಈ ಫೋಟೋಗಳು ಡಿ-ಬಾಸ್ ಅಭಿಮಾನಿಗಳಲ್ಲಿ ಸಖತ್ ಜೋಶ್ ತುಂಬಿವೆ.

error: Content is protected !!