Wednesday, December 10, 2025

ದರ್ಶನ್ ಜೈಲಲ್ಲಿ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ, ಸುಳ್ಳು ಸುದ್ದಿ: ವಿಜಯಲಕ್ಷ್ಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಡೆವಿಲ್’ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಅವರು ಜೈಲಿನಲ್ಲಿ ಸಹ ಕೈದಿಗಳ ಮೇಲೆ ಹಲ್ಲೆ ಮಾಡಿದ್ದರು ಎಂದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಜೈಲಿಗೆ ಹೋದರೂ ದರ್ಶನ್ ಬದಲಾಗಿಲ್ಲ, ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದರು. ಈ ವಿಷಯದ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ‘ದರ್ಶನ್ ಜೈಲಲ್ಲಿ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ನಾನು ಖುದ್ದಾಗಿ ಜೈಲಿಗೆ ಭೇಟಿ ಮಾಡಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಮೇಲಿನ ಆರೋಪಗಳೆಲ್ಲ ಉದ್ದೇಶಪೂರ್ವಕವಾಗಿ ಮಾಡಲಾಗಿದೆ’ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ.

‘ದರ್ಶನ್​ ಕುರಿತ ವದಂತಿಗಳಿಂದ ನನಗೆ ನೋವುಂಟಾಗಿದೆ. ಸತ್ಯವು ಸ್ವಲ್ಪ ಸಮಯದವರೆಗೆ ಮೌನವಾಗಿರಬಹುದು. ಆದರೆ ಎಂದಿಗೂ ತಲೆಬಾಗುವುದಿಲ್ಲ. ಸುಳ್ಳುಗಳು ಜೋರಾಗಿ ಪ್ರತಿಧ್ವನಿಸುತ್ತದೆ’ ಎಂದು ವಿಜಯಲಕ್ಷ್ಮೀ ಪೋಸ್ಟ್ ಮಾಡಿದ್ದಾರೆ.

error: Content is protected !!