ಹೊಸದಿಗಂತ ವರದಿ ಯಾದಗಿರಿ:
ಕೆಂಭಾವಿ ಪಟ್ಟಣದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ.
ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಪಥ ಸಂಚಲನ ನಡೆಸುವ ಬಗ್ಗೆ ನ.1 ರಂದು ಶಾಂತಿ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಅಉರಪುರ ತಾಲೂಕಾಡಳಿತ ವರದಿ ಸಲ್ಲಿಸಿತ್ತು. ತಹಶಿಲ್ದಾರ, ಡಿವೈಎಸ್ಪಿ ನೇತೃತ್ವದಲ್ಲಿ ನಡೆದಿದ್ದ ಶಾಂತಿ ಸಭೆ ವಿಫಲವಾಗಿತ್ತು.
ದಂಡ ಹಿಡಿದು ಪಥಸಂಚಲನ ನಡೆಸದಂತೆ ಡಿಎಸ್ ಎಸ್ ಪಟ್ಟು ಹಿಡಿದಿತ್ತು. ಈ ವಿಷಯ ಜಿಲ್ಲಾಡಳಿತ ಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ 10 ಷರತ್ತುಗಳನ್ನು ವಿಧಿಸಿ ಪಥ ಸಂಚಲನ ನಡೆಸಲು ಅನುಮತಿ ನೀಡಿದ್ದಾರೆ.

