Friday, September 19, 2025

ಇನ್ಸ್ಟಾಗ್ರಾಮ್‌ನಲ್ಲಿ ಮಾನಹಾನಿ: ಮನನೊಂದು ಯುವಕ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ಸ್ಟಾಗ್ರಾಮ್‌ನಲ್ಲಿ ಮಾನಹಾನಿಯಾಗುವಂತ ವಿಡಿಯೋ ಪೋಸ್ಟ್‌ ಆಗಿದ್ದು, ಇದನ್ನು ನನ್ನ ಪ್ರೀತಿಸುವ ಹುಡುಗಿ ನೋಡಿದರೆ ಆಕೆಗೆ ಬೇಸರವಾಗುತ್ತದೆ ಎಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತಿಯನ್ನು ಕಳೆದುಕೊಂಡು, ಗಾರೆ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದ ತಾಯಿಗೆ ಆಘಾತವಾಗಿದೆ.

ಘಟನೆ ಏನು?

ಹಾಸನದ, ಕಲ್ಲೇನಹಳ್ಳಿ ಗ್ರಾಮದ ಯುವಕ ಪವನ್‌ ಮೊಸಳೆಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಕೋರ್ಸ್‌ ಮಾಡುತ್ತಿದ್ದ. ಕಾಲೇಜಿನಲ್ಲಿ ತನ್ನ ಸ್ನೇಹಿತೆಯರ ಜೊತೆ ಆತ ಮಾತನಾಡುತ್ತಿದ್ದ ವೇಳೆ ಸಲುಗೆಯಲ್ಲಿ ಕೈ ಹಿಡಿದುಕೊಂಡಿದ್ದಾನೆ. ಇದನ್ನು ಯುವತಿಯೊಬ್ಬಳು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಮಾತುಗಳನ್ನು ಸೇರಿಸಿ ಅಪ್‌ಲೋಡ್‌ ಮಾಡಿದ್ದಾಳೆ.

ಇದನ್ನು ಇನ್ಸ್ಟಾಗ್ರಾಮ್‌ನಿಂದ ತೆಗೆಸಬೇಕು ಎಂದು ಪವನ್‌ ಆ ಹುಡುಗಿಯನ್ನು ಹುಡುಕಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ಆದರೆ ಆಕೆ ಸಿಕ್ಕಿಲ್ಲ. ಈ ವಿಡಿಯೋವನ್ನು ತನ್ನ ಗರ್ಲ್‌ಫ್ರೆಂಡ್‌ ನೋಡಿದರೆ ಆಕೆ ಮನಸ್ಸಿಗೆ ನೋವಾಗುತ್ತದೆ ಎಂದು ಪವನ್‌ ಸಾಯುವ ಆಲೋಚನೆ ಮಾಡಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಪವನ್‌ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಷ್ಟಪಟ್ಟು ಮಗನನ್ನು ಸಾಕುತ್ತಿದ್ದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ವಿಡಿಯೋ ಮಾಡಿದ ಹುಡುಗಿಯನ್ನು ಹುಡುಕಿ ಶಿಕ್ಷೆ ಕೊಡಿ ಎಂದು ತಾಯಿ ಗೋಗರೆದಿದ್ದಾರೆ.

ಇದನ್ನೂ ಓದಿ