ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿನ ಎರಡು ಸೀಸನ್‌ಗಳ ಯಶಸ್ಸಿನ ನಂತರ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ದೆಹಲಿ ಕ್ರೈಮ್ ಸೀಸನ್-3’ ಇದೀಗ ತನ್ನ ಹೊಸ ಅಧ್ಯಾಯದೊಂದಿಗೆ ಮರಳಿ ಬರುತ್ತಿದೆ. ಕ್ರೈಮ್ ಥ್ರಿಲ್ಲರ್ ಪ್ರಕಾರದ ಈ ಜನಪ್ರಿಯ ವೆಬ್ ಸರಣಿ ಮತ್ತೆ ಒಂದು ಗಂಭೀರ ಸಾಮಾಜಿಕ ವಿಷಯವಾದ ಮಾನವ ಕಳ್ಳಸಾಗಣೆ ಕುರಿತ ಕಥೆಯನ್ನು ತೆರೆಮೇಲೆ ತರುತ್ತಿದೆ. ನವೆಂಬರ್ 13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಇದು ಅಧಿಕೃತವಾಗಿ ಸ್ಟ್ರೀಮಿಂಗ್ ಆಗಲಿದ್ದು, ಅದರ ಟ್ರೈಲರ್ ನವೆಂಬರ್ 4ರಂದು ಬಿಡುಗಡೆಯಾಗಲಿದೆ.
ಈ ಸೀಸನ್‌ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿ ಶೆಫಾಲಿ ಶಾ ಅವರು ಡಿಸಿಪಿ ವರ್ತಿಕಾ ಚತುರ್ವೇದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಧೈರ್ಯಶಾಲಿ ಪಾತ್ರವು ಈ ಸರಣಿಯ ಹೃದಯ ಭಾಗವಾಗಿದ್ದು, ಅಪರಾಧದ ವಿರುದ್ಧ ಹೋರಾಟದ ನೈಜ ಚಿತ್ರಣ ನೀಡುತ್ತದೆ. ಜೊತೆಗೆ ಹುಮಾ ಖುರೇಷಿ ಈ ಬಾರಿ “ಬಡಿ ದೀದಿ” ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸ ಲುಕ್‌ನಲ್ಲೇ ಗಮನ ಸೆಳೆಯುತ್ತಿದ್ದಾರೆ.

