Sunday, October 19, 2025

ಹಾಸನಾಂಬೆಯ ದರುಶನಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರ ದಂಡು: ₹1000 ಮತ್ತು ₹300 ಟಿಕೆಟ್ ಸಾಲುಗಳು ಭರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನದಲ್ಲಿ ನಡೆಯುತ್ತಿರುವ ಶ್ರೀ ಹಾಸನಾಂಬ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಭಕ್ತ ಪ್ರವಾಹವೇ ಹರಿದುಬರುತ್ತಿದೆ.

ಒಂಬತ್ತನೇ ದಿನವಾದ ಇಂದು ಭಾರೀ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಸಾಮಾನ್ಯ ಸಾಲು, ₹1000 ಮತ್ತು ₹300 ಟಿಕೆಟ್ ಸಾಲುಗಳು ಭರ್ತಿಯಾಗಿದ್ದು, ಧರ್ಮ ದರ್ಶನದ ಸಾಲುಗಳಲ್ಲಿಯೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರು ದೇವಾಲಯದಲ್ಲಿ ದರ್ಶನಕ್ಕಾಗಿ ಸಾಲುಗಟ್ಟಿದರು.

]ಈ ಸಂದರ್ಭದಲ್ಲಿ ಉಪ ಲೋಕಾಯುಕ್ತ ಫಣೀಂದ್ರ, ಮಾಜಿ ಶಾಸಕ ಪ್ರೀತಂ, ಶಾಸಕ ಸುನಿಲ್, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ವಿವೇಕಾನಂದ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಚಲನಚಿತ್ರ ನಟ-ನಟಿಯರು ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದರು. ಜಾತ್ರಾ ಮಹೋತ್ಸವದ ಉತ್ಸಾಹ ಮತ್ತು ಭಕ್ತಿಯ ವಾತಾವರಣದಲ್ಲಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ಭಕ್ತರ ಜನಸಂದಣಿಯಿಂದ ಕಿಕ್ಕಿರಿದಿವೆ.

error: Content is protected !!