ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಸ್‌ಐಟಿ ತನಿಖೆಯ ಸಂದರ್ಭ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಪೈಕಿ ಒಂದು ಅಸ್ಥಿಪಂಜರದ ಗುರುತನ್ನು ಗುರುತು ಚೀಟಿಯ ಮೂಲಕ ಎಸ್‌ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಕೊಡುಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಟೊ. ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70) ಎಂಬವರ ಗುರುತು ಚೀಟಿ ಇದಾಗಿದ್ದು, ಅವರು ಈ ಹಿಂದೆ ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಮಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು. ಇದೀಗ ತಲೆ ಬುರುಡೆ ಹಾಗೂ ಎಲುಬುಗಳ ಪರಿಸರದಲ್ಲಿಯೇ ಗುರುತುಚೀಟಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಇದು ಅವರದ್ದೇ ಮೃತದೇಹ ಎಂದು ಶಂಕಿಸಲಾಗಿದೆ. ಆದರೆ ಸತ್ಯಾಂಶ ವಿಧಿವಿಜ್ಞಾನ ಪ್ರಯೊಗಾಲಯದ ವರದಿ ಬಳಿಕವೇ ದೃಢಪಡಲಿದೆ.