ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಧಿ ಶೋಧ ಪ್ರಕರಣಕ್ಕೆ ಸಂಬಂಧಿಸಿ ನಡೆದ ತನಿಖೆಯ ವೇಳೆ ಧರ್ಮಸ್ಥಳ ಗ್ರಾಮದಲ್ಲಿ ಪತ್ತೆಯಾದ ಮಾನವ ಕಳೆಬರಗಳ ಎಫ್‌ಎಸ್‌ಎಲ್ ವರದಿ ಮುಂದಿನ ವಾರ ಎಸ್‌ಐಟಿ ಕೈ ಸೇರುವ ನಿರೀಕ್ಷೆಯಿದೆ.
ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂಬ ಮಾಸ್ಕ್‌ಮ್ಯಾನ್ ಚಿನ್ನಯ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದ ಎಸ್‌ಐಟಿ, ಸೋಕೋ ಟೀಂ ಧರ್ಮಸ್ಥಳ ಗ್ರಾಮದ ಒಟ್ಟು 17 ಕಡೆಗಳಲ್ಲಿ ಭೂಮಿಯನ್ನು ಅಗೆತ ನಡೆಸಿತ್ತು. ಈ ಸಂದರ್ಭ 120ಕ್ಕೂ ಹೆಚ್ಚು ಅವಶೇಷ ಕಲೆ ಹಾಕಿದ್ದ ಅಧಿಕಾರಿಗಳು ಸುಮಾರು 70ಕ್ಕೂ ಹೆಚ್ಚು ಕಡೆಗಳಲ್ಲಿ ಮಣ್ಣಿನ ಸ್ಯಾಂಪಲ್ ಕೂಡಾ ಸಂಗ್ರಹ ಮಾಡಿದ್ದರು. ಇವುಗಳನ್ನು ಎಫ್‌ಎಸ್‌ಎಲ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇದರ ವರದಿ ಮುಂದಿನ ವಾರ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸ್ಯಾಂಪಲ್‌ಗಳಲ್ಲಿ ಮಾನವ ಡಿಎನ್‌ಎ ಪತ್ತೆಯಾದರೆ ಪ್ರಕರಣ ಹೊಸ ತಿರುವು ಪಡೆಯಲಿದ್ದು, ಇಲ್ಲವಾದಲ್ಲಿ ಆರೋಪ ನಡೆಸಿದವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.