Thursday, September 4, 2025

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಕಚೇರಿಗೆ ಜಯಂತ್, ಬೆಳ್ತಂಗಡಿ ಠಾಣೆಗೆ ಸೌಜನ್ಯಾ ತಾಯಿ ಹಾಜರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಸೌಜನ್ಯಾ ಹೋರಾಟ ಸಮಿತಿಯ ಸದಸ್ಯ ಜಯಂತ್ ಟಿ. ಗುರುವಾರ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ.

ಈ ಸಂದರ್ಭ ಸುದೀರ್ಘ ಕಾಲ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿದ್ದಾರೆ. ಜಯಂತ್ ಟಿ. ಬ್ಯಾಗ್‌ನೊಂದಿಗೆ ವಿಚಾರಣೆಗೆ ಹಾಜರಾಗಿರುವುದು ಹಲವು ಕುತೂಹಲ ಮೂಡಿಸಿದ್ದು, ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಎಸ್‌ಐಟಿ ನೀಡಿಲ್ಲ.

ಈ ನಡುವೆ ಸೌಜನ್ಯಾ ಅವರ ತಾಯಿ ಕುಸುಮಾತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ಅವರು ಈ ಸಂದರ್ಭ ಕುಸುಮಾವತಿ ಅವರ ಜೊತೆಗಿದ್ದರು. ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗುತ್ತಿರುವ ಅಪಪ್ರಚಾರಗಳ ಬಗ್ಗೆ ಅವರು ದೂರು ನೀಡಲು ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ