Wednesday, September 3, 2025

ಧರ್ಮಸ್ಥಳ ಪ್ರಕರಣ: ಗ್ರಾಮ ಪಂಚಾಯಿತಿಯಿಂದ ಹಲವು ದಾಖಲೆ ಸಂಗ್ರಹಿಸಿದ ಎಸ್‌ಐಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಂಡಿರುವ ಬೆನ್ನಿಗೇ ಎಸ್‌ಟಿಐ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಾಂತಿ, ಡಿಜಿಪಿ ಅನುಚೇತ್, ಎಸಿ ಸ್ಟೆಲ್ಲಾ ವರ್ಗಿಸ್ ಸಹಿತ ಅಧಿಕಾರಿಗಳ ತಂಡ ಬುಧವಾರ ಸಂಬಂಧಪಟ್ಟ ಅಗತ್ಯ ಇಲಾಖೆಯ ಅಧಿಕಾರಿಗಳ ಜೊತೆ ಎರಡು ಸುತ್ತಿನ ಸಭೆ ನಡೆಸಿದ್ದಾರೆ.

ಇದಲ್ಲದೆ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಆಗಮಿಸಿದ ಒಂದು ತಂಡ ಇಲ್ಲಿಂದ ಹಲವು ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ಕೂಡಾ ಮಾಹಿತಿ ಲಭ್ಯವಾಗಿದೆ. ಮೂಲಗಳ ಮಾಹಿತಿ ಪ್ರಕಾರ 1995 ರಿಂದ 2014 ರವರೆಗೆ ಕರ್ತವ್ಯ ಮಾಡಿದ ಪಿಡಿಒಗಳು, ಇತರ ಅಧಿಕಾರಿಗಳ ವಿ.ಎ.ಗಳ ಬಗೆಗಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ