Saturday, September 6, 2025

ಧರ್ಮಸ್ಥಳ ತಲೆಬುರುಡೆ ಪ್ರಕರಣ: ಶಾಸಕ ರೆಡ್ಡಿ ವಿರುದ್ಧ ಸಂಸದ ಸೆಂಥಿಲ್ ಮಾನನಷ್ಟ ಮೊಕದ್ದಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟು ತಮ್ಮ ಮೇಲೆ ಷಡ್ಯಂತ್ರ ನಡೆಸಿದ ಆರೋಪ ಮಾಡಿರುವ ಗಂಗಾವತಿ ಶಾಸಕ ಜರ್ನಾದನ ರೆಡ್ಡಿ ವಿರುದ್ಧ ಸಂಸದ ಶಶಿಕಾಂತ್ ಸೆಂಥಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ತಮ್ಮ ವಕೀಲ ಸೂರ್ಯ ಮುಕುಂದರಾಜ್ ಜೊತೆ ಇಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಆಗಮಿಸಿದ ಸಿಂಥೆಲ್, ಖಾಸಗಿ ದೂರು ಸಲ್ಲಿಕೆ ಮಾಡಿದ್ದಾರೆ. ಮುಂದೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದು, ಸೆ.11 ರಂದು ಈ ದೂರು 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸೆಂಥಿಲ್, ಧರ್ಮಸ್ಥಳದ ತಲೆ ಬುರುಡೆ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ನನ್ನ ಹೆಸರು ಬಳಸಿದ್ದಾರೆ. ಈ ಬಗ್ಗೆ ಅವರು ನ್ಯಾಯಾಲಯದಲ್ಲಿ ಉತ್ತರಿಸಬೇಕಿದೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬಂತು ಎಂಬುದೇ ಆಶ್ವರ್ಯವಾಗುತ್ತಿದೆ. ಸುಮ್ಮನಿದ್ದರೆ ಬೇರೆಯೇ ಕಥೆ ಸೃಷ್ಟಿಯಾಗುವ ಅಪಾಯವಿದೆ ಹಾಗಾಗಿ ಕಾನೂನಿನ ಮೊರೆ ಹೋಗಿದ್ದೇನೆ. ಸತ್ಯ ಏನು ಎಂಬುದು ತನಿಖೆಯಿಂದ ಹೊರ ಬರಲಿ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ನನಗೆ ದೆಹಲಿಯಲ್ಲಿ ಇನ್ನೂ ಮನೆಯೇ ಕೊಟ್ಟಿಲ್ಲ. ತಮಿಳುನಾಡು ಹೌಸ್‌ನಲ್ಲಿ ಇದ್ದೇನೆ. ಬಂಧಿತ ಆರೋಪಿಯೂ ನನ್ನನ್ನು ಭೇಟಿಯಾಗಿಲ್ಲ. ಇನ್ನು ಈ ಬುರುಡೆ ಎಲ್ಲಿ ಸಿಕ್ಕಿತು, ತಂದವರು ಯಾರು ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ