Monday, January 12, 2026

CINE | ನಾಲ್ಕು ಸಿನಿಮಾ ದಾಖಲೆ ಹಿಂದಿಕ್ಕಿದ ‘ಧುರಂಧರ್’ ಕಲೆಕ್ಷನ್‌, ಯಾವ ಸಿನಿಮಾಗಳವು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಣ್‌ವೀರ್‌ ಸಿಂಗ್‌ ನಟನೆಯ ಧುರಂಧರ್‌ ಸಿನಿಮಾ ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿದೆ. ಜನ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಧುರಂಧರ್‌ ನಾಲ್ಕು ದೊಡ್ಡ ಸಿನಿಮಾಗಳ ದಾಖಲೆಯನ್ನು ದಾಟಿ ಮುಂದೆ ಬಂದಿದೆ. ಯಾವು ಆ ಸಿನಿಮಾಗಳು?

ʼಬಾಹುಬಲಿ 2’ ಸಿನಿಮಾ 2016ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ಬರೆದ ದಾಖಲೆ ಒಂದೆರಡಲ್ಲ. ಇದನ್ನು ಅಳಿಸಲು ಅನೇಕ ಸಿನಿಮಾಗಳ ಬಳಿ ಸಾಧ್ಯವೇ ಆಗಿಲ್ಲ. ಆದರೆ, ದಶಕಗಳ ಬಳಿಕ ಬಂದ ‘ಧುರಂದರ್’ ಸಿನಿಮಾ ಈ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.

ಉತ್ತರ ಅಮೇರಿಕದಲ್ಲಿ ‘ಬಾಹುಬಲಿ 2’ ಚಿತ್ರವನ್ನು 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಇದಾದ ಬಳಿಕ ಯಾವ ಭಾರತೀಯ ಸಿನಿಮಾಗೂ 20 ಲಕ್ಷಕ್ಕೂ ಹೆಚ್ಚು ಜನರು ಬಂದಿರಲಿಲ್ಲ. ಆದರೆ, ‘ಧರುಂಧರ್ 2’ ಚಿತ್ರಕ್ಕೆ ಉತ್ತರ ಅಮೆರಿಕದಲ್ಲಿ 2 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರ ಆಗಮನ ಆಗಿದೆ. ಈ ಮೂಲಕ ದಶಕದ ಹಿಂದಿನ ದಾಖಲೆ ಮುರಿದು ಬಿದ್ದಿದೆ.

ಈ ಸಿನಿಮಾ ನಾಲ್ಕು ಹಿಟ್ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿದೆ. ‘ಕೆಜಿಎಫ್ ಚಾಪ್ಟರ್ 2’, ‘ಆರ್​​ಆರ್​​ಆರ್​’, ‘ಜವಾನ್’ ಹಾಗೂ ‘ಪಠಾಣ್’ ಚಿತ್ರಗಳ ಕಲೆಕ್ಷನ್​ ಮೀರಿ ‘ಧುರಂಧರ್’ ಚಿತ್ರದ ಕಲೆಕ್ಷನ್ ನಿಂತಿದೆ. ಇನ್ನಷ್ಟು ದಾಖಲೆಗಳು ಚಿತ್ರದಿಂದ ನಿರೀಕ್ಷಿಸಬಹುದಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!