ಮಳೆಗಾಗಿ ಯಾದಗಿರಿಯಲ್ಲಿ ವಿಭಿನ್ನ ಆಚರಣೆ: ವರುಣ ದೇವನಿಗಾಗಿ ಏಳು ದಿನಗಳ ಅಖಂಡ ಶಿವನಾಮ ಸ್ಮರಣೆ

ಹೊಸದಿಗಂತ ವರದಿ ಯಾದಗಿರಿ: ಯಾದಗಿರಿ: ಮಳೆಯಿಲ್ಲದೆ ಬೆಳೆ ಒಣಗಿದ ಪರಿಣಾಮ ಕಂಗಲಾಗಿರುವ ಜಿಲ್ಲೆಯ ರೈತರ ಒಳಿತಾಗಲಿ, ಈ ನಿಟ್ಟಿನಲ್ಲಿ ಮಳೆರಾಯ ಬೇಗನೇ ಧರೆಗೆ ಇಳಿಯಲಿ ಎಂಬ ಭಕ್ತಿಹರಕೆಯೊಂದಿಗೆ ಇಲ್ಲಿಗೆ ಸಮೀಪದ ಹೆಡಗಿಮದ್ರಿ ಗ್ರಾಮದ ಶಾಂತ ಶಿವಯೋಗೇಶ್ವರ ಸಂಸ್ಥಾನ ಮಠದಲ್ಲಿ ಏಳು ದಿನಗಳ ಸಪ್ತ ಭಜನೆ ಹಾಗೂ ಶಿವನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದೆ. ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸಾನಿಧ್ಯದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರದಿಂದ ರೈತರು ಸಪ್ತಭಜನೆ ಆರಂಭಿಸಿದ್ದಾರೆ. ಇದನ್ನೂ ಓದಿ: … Continue reading ಮಳೆಗಾಗಿ ಯಾದಗಿರಿಯಲ್ಲಿ ವಿಭಿನ್ನ ಆಚರಣೆ: ವರುಣ ದೇವನಿಗಾಗಿ ಏಳು ದಿನಗಳ ಅಖಂಡ ಶಿವನಾಮ ಸ್ಮರಣೆ