ಹೊಸದಿಗಂತ ವರದಿ ಯಾದಗಿರಿ:
ಯಾದಗಿರಿ: ಮಳೆಯಿಲ್ಲದೆ ಬೆಳೆ ಒಣಗಿದ ಪರಿಣಾಮ ಕಂಗಲಾಗಿರುವ ಜಿಲ್ಲೆಯ ರೈತರ ಒಳಿತಾಗಲಿ, ಈ ನಿಟ್ಟಿನಲ್ಲಿ ಮಳೆರಾಯ ಬೇಗನೇ ಧರೆಗೆ ಇಳಿಯಲಿ ಎಂಬ ಭಕ್ತಿಹರಕೆಯೊಂದಿಗೆ ಇಲ್ಲಿಗೆ ಸಮೀಪದ ಹೆಡಗಿಮದ್ರಿ ಗ್ರಾಮದ ಶಾಂತ ಶಿವಯೋಗೇಶ್ವರ ಸಂಸ್ಥಾನ ಮಠದಲ್ಲಿ ಏಳು ದಿನಗಳ ಸಪ್ತ ಭಜನೆ ಹಾಗೂ ಶಿವನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದೆ.
ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸಾನಿಧ್ಯದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರದಿಂದ ರೈತರು ಸಪ್ತಭಜನೆ ಆರಂಭಿಸಿದ್ದಾರೆ.
ಇದನ್ನೂ ಓದಿ:
ಬರುವ ಸೋಮವಾರ ಬೆಳಗ್ಗೆ ಮುಕ್ತಾಯವಾಗಲಿರುವ ಈ ಸಪ್ತಭಜನೆ ಕಾರ್ಯಕ್ರಮದ ವಿವರ ನೀಡಿದ ರಾಚಣ್ಣಗೌಡ ಮುದ್ನಾಳ ಅವರು, ಪ್ರತಿ ಎರಡು ಗಂಟೆಗಳೊಮ್ಮೇ ಪಾಳಿ ಪ್ರಕಾರ ಏಳು ಜನ ರೈತರು ದೇವಸ್ಥಾನದ ಪ್ರಾಂಗಣದಲ್ಲಿ ಸಪ್ತಭಜನೆ ಮಾಡುವರು. “ಓಂ ನಮಃ ಶಿವಾಯ” ಎಂಬ ಮಂತ್ರದೊಂದಿಗೆ ವರುಣ ಬೇಗನೇ ಧರೆಗೆ ಇಳಿದು ಅನ್ನದಾತನನ್ನು ಉಳಿಸಿ,ಬೆಳೆಸು ಎಂಬ ಭಕ್ತಿಯ ಪೂಜೆ ಆರಂಭವಾಗಿದೆ.



