ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕಚೇರಿಯಲ್ಲಿ ಇಂದು ಬಲಿಪಾಡ್ಯಮಿ ಹಾಗೂ ದೀಪಾವಳಿಯ ಅಂಗವಾಗಿ ಲಕ್ಷ್ಮೀ ಮತ್ತು ಸರಸ್ವತಿ ದೇವಿಯರ ಪೂಜೆಯನ್ನು ನೆರವೇರಿಸಲಾಯಿತು.
ಇದೇ ವೇಳೆ ರಾಜಕೀಯ ಮುಖಂಡರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೋಶಿ, ದೇಶದ ಜನತೆಗೆ ಹಾಗೂ ವಿಶೇಷವಾಗಿ ಧಾರವಾಡ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ದೀಪಾವಳಿ ಹಬ್ಬವನ್ನು ಪ್ರತಿಯೊಬ್ಬರೂ ಸಂತೋಷ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ನಾಡಿನ ಎಲ್ಲಾ ವಿಪತ್ತುಗಳು ದೂರವಾಗಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲೆಂದು ಹಾರೈಸುವುದಾಗಿ ತಿಳಿಸಿದರು.
ಹುಬ್ಬಳ್ಳಿಯ ಪ್ರಲ್ಹಾದ್ ಜೋಶಿ ಕಚೇರಿಯಲ್ಲಿ ದೀಪಾವಳಿ ಪೂಜೆ: ದೇಶ, ಧಾರವಾಡ ಕ್ಷೇತ್ರದ ಜನತೆಗೆ ಸಚಿವರಿಂದ ಹಬ್ಬದ ಶುಭಾಶಯ

