ದೈನಂದಿನ ಬಳಕೆಯಲ್ಲಿ ಕನ್ನಡಿಯ ಮೇಲೆ ಧೂಳು, ನೀರಿನ ಕಲೆ, ಬೆರಳಚ್ಚು ಮತ್ತು ಸಾಬೂನು ಕಲೆ ಜಮೆಯಾಗುವುದು ಸಹಜ. ಇವು ಸಮಯದ ಜೊತೆ ಕನ್ನಡಿಯ ಮೆರುಗನ್ನು ಕಡಿಮೆ ಮಾಡಿ, ಸ್ಪಷ್ಟ ಪ್ರತಿಬಿಂಬ ಕಾಣದಂತೆ ಮಾಡುತ್ತವೆ. ಆದರೆ ಇದನ್ನು ಕ್ಲೀನ್ ಮಾಡೋದಕ್ಕೆ ಮಾರುಕಟ್ಟೆಯ ದುಬಾರಿ ಕ್ಲೀನರ್‌ಗಳ ಅಗತ್ಯವೇ ಇಲ್ಲ, ಮನೆಯಲ್ಲೇ ಇರುವ ಸರಳ ವಸ್ತುಗಳಿಂದಲೇ ಮಸುಕಾದ ಕನ್ನಡಿಯನ್ನು ಹೊಸದಂತೆ ಹೊಳೆಯುವಂತೆ ಮಾಡಬಹುದು. ಸ್ವಲ್ಪ ಜಾಗ್ರತೆ ಮತ್ತು ಸರಿಯಾದ ವಿಧಾನ ಅನುಸರಿಸಿದರೆ ಸಾಕು.
- ಬಿಸಿ ನೀರು ಮತ್ತು ಸಾಬೂನು ನೀರು: ಮೊದಲು ಕನ್ನಡಿಯ ಮೇಲಿನ ಧೂಳನ್ನು ಒಣ ಬಟ್ಟೆಯಿಂದ ಒರಸಿ. ನಂತರ ಸ್ವಲ್ಪ ಬಿಸಿ ನೀರಿಗೆ ಮೃದುವಾದ ದ್ರವ ಸಾಬೂನು ಸೇರಿಸಿ ಬಟ್ಟೆ ಅಥವಾ ಸ್ಪಾಂಜ್‌ನಿಂದ ನಿಧಾನವಾಗಿ ಒರೆಸಿ. ಇದರಿಂದ ಮೇಲಿನ ಮಸಿ ಸುಲಭವಾಗಿ ಹೋಗುತ್ತದೆ.
- ವಿನೆಗರ್ ಮತ್ತು ನೀರಿನ ಮಿಶ್ರಣ: ಸಮಾನ ಪ್ರಮಾಣದ ವಿನೆಗರ್ ಮತ್ತು ನೀರನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕನ್ನಡಿಯ ಮೇಲೆ ಸಿಂಪಡಿಸಿ. ಸ್ವಚ್ಛ ಮೈಕ್ರೋಫೈಬರ್ ಬಟ್ಟೆಯಿಂದ ವೃತ್ತಾಕಾರದ ಚಲನೆಯಲ್ಲಿ ಒರೆಸಿದರೆ ನೀರಿನ ಕಲೆಗಳು ಮಾಯವಾಗುತ್ತವೆ.
- ಬೇಕಿಂಗ್ ಸೋಡಾ ಉಪಯೋಗ: ಹಠಾತ್ ಕಲೆಗಳಿದ್ದರೆ ಸ್ವಲ್ಪ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಮೃದುವಾಗಿ ಹಚ್ಚಿ ತೊಳೆಯಿರಿ. ಜೋರಾಗಿ ಒರೆಸಬೇಡಿ, ಇಲ್ಲವಾದರೆ ಗಾಜಿಗೆ ಹಾನಿಯಾಗಬಹುದು.
- ಪೇಪರ್ ಅಥವಾ ನ್ಯೂಸ್‌ಪೇಪರ್ ವಿಧಾನ: ಕ್ಲೀನಿಂಗ್ ನಂತರ ಹಳೆಯ ನ್ಯೂಸ್‌ಪೇಪರ್‌ನಿಂದ ಒರೆಸಿದರೆ ಯಾವುದೇ ಕಲೆ ಉಳಿಯುವುದಿಲ್ಲ.

