ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿಗಣತಿ ವೇಳೆ ಜನರಿಗೆ ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದ್ಯಾ? ಕೋಳಿ ಇದೆಯಾ? ಕುರಿ ಸಾಕಿದ್ದೀರಾ? ಎನ್ನುವ ಪ್ರಶ್ನೆಗಳನ್ನು ಕೇಳಬೇಡಿ. ಇವೆಲ್ಲ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕೆ ಉತ್ತರ ಕೊಡಿ. ಕೊಡಬಾರದು ಅನ್ನಿಸಿದರೆ ಕೊಡಬಾರದು. ಎಷ್ಟು ವಾಚ್, ಎಷ್ಟು ಚಿನ್ನ ಇದೆ, ಎಷ್ಟು ಫ್ರಿಡ್ಜ್ ಇದೆ ಅದೆಲ್ಲ ಕೇಳಬೇಡಿ. ಅದು ಅವರ ಪರ್ಸನಲ್ ಬಿಟ್ಟು ಬಿಡಿ ಎಂದು ಅಧಿಕಾರಿಗಳಿಗೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಯಾರು ಬೇಕಾದರೂ ಅಪೇಕ್ಷೆಪಡಲಿ. ಕೋರ್ಟ್ ಹೇಳಿದೆ, ಏನು ಬೇಕೋ ಅದಕ್ಕೆ ಮಾತ್ರ ಉತ್ತರ ನೀಡಿ. ನಿಮಗೆ ಇಷ್ಟವಿಲ್ಲದ ಪ್ರಶ್ನೆಗೆ ಉತ್ತರ ಕೊಡ್ಲೇಬೇಕು ಅಂತೇನಿಲ್ಲ. ಆದರೆ ಸಮೀಕ್ಷೆ ವಿರೋಧ ಮಾಡೋದರಲ್ಲಿ ಅರ್ಥ ಇಲ್ಲ, ಎಲ್ಲರೂ ಭಾಗಿಯಾಗಬೇಕು. ಇಲಾಖೆಯವರು ಏನು ಮಾಡುತ್ತಾರೆ, ಮಾಡಲಿ. ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.