Sunday, January 11, 2026

ಇಡ್ಲಿ ತಿನ್ನೋಕೆ ಎಷ್ಟು ಕಷ್ಟಪಟ್ಟಿದ್ದೀನಿ ಗೊತ್ತಾ? ಧನುಷ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಧನುಷ್‌ ಹೊಸ ಸಿನಿಮಾವೊಂದು ಬರಲಿದೆ. ಇದರ ಹೆಸರು ಇಡ್ಲಿ ಕಡಾಯಿ. ಈ ಸಿನಿಮಾ ಪ್ರಮೋಷನ್‌ ವೇಳೆ ಧನುಷ್‌ ತಾವು ಸಣ್ಣವರಿದ್ದಾಗ ಒಂದು ಇಡ್ಲಿ ತಿನ್ನೋಕೆ ಎಷ್ಟೆಲ್ಲಾ ಕಷ್ಟಪಟ್ಟಿದ್ದೆವು ಎಂದು ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಾನು ಬಾಲ್ಯದಲ್ಲಿ ಪ್ರತಿದಿನ ಇಡ್ಲಿ ತಿನ್ನಲು ಹಂಬಲಿಸುತ್ತಿದ್ದೆ. ಆದರೆ ನನಗೆ ಅವುಗಳನ್ನು ಖರೀದಿಸಲು ಹಣ ಇರುತ್ತಿರಲಿಲ್ಲ. ಹೀಗಾಗಿ, ನಾವು ಹೂವುಗಳನ್ನು ಸಂಗ್ರಹಿಸುತ್ತಿದ್ದೆವು. ನಾವು ಎಷ್ಟು ಹೂವನ್ನು ಸಂಗ್ರಹಿಸುತ್ತೇವೆ ಎಂಬುದರ ಆಧಾರದ ಮೇಲೆ ನಮಗೆ ಸಿಗೋ ಹಣ ನಿರ್ಧಾರ ಆಗುತ್ತಿತ್ತು. ನನ್ನ ಜೊತೆ ನನ್ನ ಸಹೋದರಿ, ಸೋದರಸಂಬಂಧಿಗಳು ಇದನ್ನು ಮಾಡುತ್ತಿದ್ದರು’ ಎಂದು ಅವರು ಹೇಳಿದ್ದಾರೆ.

‘ಈ ಕೆಲಸ ಮಾಡಿದ್ದಕ್ಕೆ ನಮಗೆ ತಲಾ 2 ರೂಪಾಯಿ ಸಿಗುತ್ತಿತ್ತು. ನಂತರ, ನಾವು ಸ್ಥಳೀಯ ಪಂಪ್ ಸೆಟ್‌ಗೆ ಹೋಗಿ ಸ್ನಾನ ಮಾಡುತ್ತಿದ್ದೆವು. ಮುಖ್ಯ ರಸ್ತೆಯಲ್ಲಿ ಕೇವಲ ಒಂದು ಟವಲ್‌ನೊಂದಿಗೆ ನಡೆಯುತ್ತಿದ್ದೆವು. ಆ ಹಣಕ್ಕೆ ನಮಗೆ ನಾಲ್ಕರಿಂದ ಐದು ಇಡ್ಲಿಗಳು ಸಿಗುತ್ತಿದ್ದವು. ಕಷ್ಟಪಟ್ಟು ದುಡಿದ ಹಣದಿಂದ ಆಹಾರ ತಿನ್ನುವಾಗ ಸಿಗುವ ತೃಪ್ತಿ ಮತ್ತು ರುಚಿಯನ್ನು ಯಾವುದೂ ಮೀರಿಸಲು ಸಾಧ್ಯವಿಲ್ಲ. ನನ್ನ ಬಾಲ್ಯದಲ್ಲಿ ಅನುಭವಿಸಿದ ಊಟದ ರುಚಿ ಈಗ ನನಗೆ ಸಿಗುತ್ತಿಲ್ಲ’ ಎಂದು ಧನುಶ್ ಹೇಳಿದ್ದಾರೆ.

ಧನುಶ್ ಅವರು ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರ ಮಗ. ಹೀಗಾಗಿ, ಧನುಶ್ ಮಾತುಗಳ ಮೇಲೆ ಅನೇಕರು ಅನುಮಾನ ಹೊರಹಾಕಿದ್ದಾರೆ. ಕಸ್ತೂರಿ ರಾಜ ಅವರು ಧನುಶ್​ಗೆ ಹಣವನ್ನೇ ನೀಡುತ್ತಿರಲಿಲ್ಲವೇ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ಸಿಂಪತಿ ಗಳಿಸಿಕೊಳ್ಳೋ ಟ್ರಿಕ್ ಎಂದಿದ್ದಾರೆ. 

error: Content is protected !!